ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ತಂದೆ ಬದಲಿಗೆ ಮಗನ ಕಿಡ್ನಾಪ್.! 3 ಗಂಟೆಗಳಲ್ಲಿ ಕಿಡ್ನಾಪರ್ಸ್ ಅರೆಸ್ಟ್

ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ಆಂಧ್ರ ಪ್ರದೇಶದ ಉದ್ಯಮಿ‌ ಜೊತೆ ರಮೇಶ್ ಎಂಬಾತ ವ್ಯವಹಾರ ಮಾಡಿದ್ದ. ಹಣದ ಸಲುವಾಗಿ ಉದ್ಯಮಿಗೆ ಬುದ್ಧಿ ಕಲಿಸಲು ಆತನ ಮಗ ಜಗದೀಶ್‌ನನ್ನು ಕಿಡ್ನಾಪ್ ಮಾಡಲಾಗಿತ್ತು. ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ ಜಗದೀಶ್ ಡಿಗ್ರಿ ಓದುತ್ತಿದ್ದ. ತಂದೆಯ ಪರಿಚಿತರಂತೆ ವರ್ತಿಸಿ ಮುಖ್ಯ ಆರೋಪಿ ರಮೇಶ್ ತಂಡ ಇನ್ನೋವಾ ಕಾರಿನಲ್ಲಿ ಜಗದೀಶ್‌ನನ್ನ ಅಪಹರಿಸಲಾಗಿತ್ತು.

ಯಲಹಂಕ ಪೊಲೀಸ್ ಠಾಣೆಯಲ್ಲಿ ರೇವಾ ಕಾಲೇಜು ವಿದ್ಯಾರ್ಥಿ ಅಪಹರಣ ಪ್ರಕರಣ ದಾಖಲಾದ 3 ಗಂಟೆಗಳಲ್ಲಿ ಚಿತ್ರದುರ್ಗ ಪೊಲೀಸರ ಸಹಕಾರದಿಂದ ನಾಲ್ಕು ಜನ ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಚಿತ್ರದುರ್ಗ ಎಸ್.ಪಿ, ಪಿಎಶ್‌ಐ ಐಮಂಗಲ ಮಂಜುನಾಥ್ ಮತ್ತು ಅವರ ತಂಡ ಪ್ರಮುಖ ಪಾತ್ರವಹಿಸಿದ್ದಾರೆ.

ಕಲಬುರಗಿಯ ನಿವಾಸಿಗಳಾದ ರಮೇಶ್ ರಾಥೋಡ್ (43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್, (23) ಹಾಗೂ ಹರೀಶ್ ಕುಮಾರ್ (24) ಬಂಧಿತ ಆರೋಪಿ. ಬಂಧಿತರಿಂದ ಇನ್ನೋವ ಕಾರು, ಫಾರ್ಚೂನರ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಯಲಹಂಕ ಪೊಲೀಸರು ಇನ್ನು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..

Edited By : Vijay Kumar
Kshetra Samachara

Kshetra Samachara

19/07/2022 01:28 pm

Cinque Terre

1.42 K

Cinque Terre

0