ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್ ನಿಂದ ಸುಟ್ಟ ಕಾಮುಕ ಪತಿ ಬಂಧನ

ಬೆಂಗಳೂರು: ಕಾಮುಕ ಪತಿಯೊಬ್ಬ ಪತ್ನಿಗೆ ವಿಕೃತವಾಗಿ ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರದೀಪ್ ಎಂಬಾತ ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ಮದ್ಯ ಕುಡಿಸಿ ದೈಹಿಕ ಹಿಂಸೆ ಕೊಡುತ್ತಿದ್ದ. ಜೊತೆಗೆ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ. ಪ್ರದೀಪ್ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಮದುವೆಯಾದ ಐದು ತಿಂಗಳಿಗೆ ಹೆಂಡತಿಗೆ ಪತಿಯ ಅಸಲಿ ಮುಖದ ದರ್ಶನವಾಗಿದೆ‌. ಇಷ್ಟು ಹಿಂಸೆ ಕೊಟ್ಟಿದ್ದಲ್ಲದೇ ಐದು ಬಾರಿ ಗರ್ಭಪಾತ ಮಾಡಿಸಿದ್ದಾನೆ ಆರೋಪ ಕೇಳಿ ಬಂದಿದೆ. ಆದರೆ ಪತ್ನಿ ಕಾಡಿ ಬೇಡಿ‌ ಎರಡು ಮಕ್ಕಳನ್ನು ಉಳಿಸಿಕೊಂಡಿದ್ದಳು.

ಪ್ರದೀಪ್ ಮನೆಗೆ ಸ್ನೇಹಿತರನ್ನು ಕರೆಸಿ ಪಾರ್ಟಿ ಮಾಡಿ ಅವರ ಮುಂದೆ ಹೆಂಡತಿಗೆ ಹಿಂಸೆ ಕೊಡುತ್ತಿದ್ದ. ಪ್ರಶ್ನಿಸಿದರೆ ಹಲ್ಲೆ ಮಾಡಿ ವಿಚ್ಚೇದನ ನೀಡುವಂತೆ ಒತ್ತಾಯ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ತವರು ಸೇರಿಕೊಂಡಿದ್ದಳು. ಆದರೆ ಪತಿ ಈಗಲೂ ಕಾಟ ಕೊಡುತ್ತಿದ್ದಾನೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದರು. ಸದ್ಯ ಕಾಮುಕ ಪ್ರದೀಪ್ ನನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ‌.

Edited By : PublicNext Desk
Kshetra Samachara

Kshetra Samachara

19/07/2022 12:58 pm

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ