ಬೆಂಗಳೂರು : ಹಿಂದೆ ಸ್ವಯಂಕೃಷಿ ನ್ಯೂಸ್ ಚಾನಲ್ ಮಾಡಿ, ಹೀರೊ, ನಿರ್ದೇಶಕ, ನಿರ್ಮಾಪಕ ಆಗಿ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿ ಜೈಲು ಪಾಲಾಗಿದ್ದವನೆ ಸ್ವಯಂ ಕೃಷಿ ಬಾಬು @ ವೀರೇಂದ್ರ ಬಾಬು ಈಗ ಆರ್ಯನ್ ಇನ್ಫೊಟೆಕ್ ಎಂಬ ಸಂಸ್ಥೆಯಡಿ V-Care Online Education ಮೂಲಕ ಉಚಿತ ಶಿಕ್ಷಣ ನೀಡ್ತೇವೆ, ಇಲ್ಲಿ ಹಣ ಹೂಡಿ, ಹೂಡಿಕೆ ಹಣವನ್ನ ಬಡ ಮಕ್ಕಳಿಗೆ ನೀಡ್ತೇವೆ ಎಂದು ಜನರಿಗೆ ಮೋಸ ಮಾಡ್ತಿದ್ದರು.
ಜನರನ್ನು ಸೇರಿಸಿ, ಅದು ಚೈನ್ ಲಿಂಕ್ ರೀತಿ ಬೆಳೆದು ನಿಮ್ಮನ್ನು ಬೆಳೆಸುತ್ತೆ ಎಂದು ನಂಬಿಸುತ್ತಿದ್ದರು. ಇವರ ಬೆಣ್ಣೆ ಮಾತು ಕೇಳಿ ಧಾರವಾಡದ ಬಸವರಾಜ್ ನೂರಾರು ಜನರಿಂದ ಸಂಗ್ರಹಿಸಿದ್ದ 1.8ಕೋಟಿ ಹಣ ನೀಡಿ ಮೋಸ ಹೋಗಿದ್ದ. ಈಗ ಬಸವರಾಜ್ ದೂರಿನಡಿ ವೀರೇಂದ್ರ ಬಾಬು ಸೇರಿದಂತೆ 7ಜನರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವೀರೇಂದ್ರ ಬಾಬುನ ಕರ್ಮಕಾಂಡ ಇಷ್ಟಕ್ಕೆ ಮುಗಿಯಲ್ಲ. ANN ಚಾರಿಟಬಲ್ ಟ್ರಸ್ಟ್, V-News 24 ಯೂಟ್ಯೂಬ್ ನ್ಯೂಸ್ ಚಾನಲ್, ಕರ್ನಾಟಕ ರಕ್ಷಣಾ ಪಡೆ & ರಾಷ್ಟ್ರೀಯ ಜನಹಿತ ಪಾರ್ಟಿ ಹೆಸರುಗಳಲ್ಲಿ ಸಾವಿರಾರು, ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ.
ಸದ್ಯ ವೀರೇಂದ್ರಬಾಬು, ಸಹಚರರಾದ,ರವಿತೇಜಸ್,ವಿಜಯ್ ನಿರಂಜನ್, ಬಸವರಾಜು, ಗೋವಿಂದೇಗೌಡ & ಶಿವಕುಮಾರ್ ರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈಗಿನ ಜನ ನಯವಾದ ವೈಟ್ ಕಾಲರ್ ಟ್ರಾಪ್ ಗೆ ಬಿದ್ದು ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಅಷ್ಟು ದುಡ್ಡು ವೀರೇಂದ್ರ ಬಾಬು ರೀತಿಯ ಖದೀಮರ ಕೈಸೇರಿರುತ್ತೆ. ಜನ ಇನ್ನಾದರು ವೀರೇಂದ್ರ ಬಾಬು ರೀತಿ ವಂಚಕರ ಜಾಲಕ್ಕೆ ಬಿಳದಿರಲಿ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
15/07/2022 10:34 pm