ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಣಕ್ಕಾಗಿ ಹೆಂಡತಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ ಪಾಪಿ!

ಬೆಂಗಳೂರು: ಖರ್ಚಿಗೆ ಹಣ ಕೊಡಲಿಲ್ಲ ಎಂದು ಹೆಂಡತಿಯನ್ನೇ ಗಂಡ ಹೊಡೆದು ಕೊಂದ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ದೇವಲಾಪುರ‌‌ ಗ್ರಾಮದಲ್ಲಿ ನಡೆದಿದೆ.‌

ಮುನಿರತ್ನ( 25) ಕೊಲೆಯಾದ ದುರ್ದೈವಿಯಾದರೆ, ಗಂಡ ವೆಂಕಟೇಶ್ ಪತ್ನಿಯನ್ನೇ ಹತ್ಯೆಗೈದ ಪಾಪಿ. ಮುನಿರತ್ನ ಹಾಗೂ ವೆಂಕಟೇಶ್ ಎರಡು‌ ವರ್ಷಗಳ ಹಿಂದೆ ಮದುವೆಯಾಗಿದ್ದರು.‌ ಆರಂಭದಲ್ಲಿ ಸುಖಿಯಾಗಿದ್ದ ಸಂಸಾರ ದಿನಕಳೆದಂತೆ‌ ನಿಸ್ಸಾರವಾಗಿತ್ತು. ವೆಂಕಟೇಶ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರ್ತಿದ್ದ.

ಈ ಬಗ್ಗೆ ಪತ್ನಿ ಪ್ರಶ್ನೆ ಮಾಡ್ತಿದ್ದು, ಜತೆಗೆ ಖರ್ಚಿಗಾಗಿ ಹೆಂಡತಿಯಲ್ಲೇ ಹಣ ಕೇಳ್ತಿದ್ದ. ಈ ವಿಷಯ ಇಬ್ಬರ ಜಗಳಕ್ಕೆ ಕಾರಣವಾಗಿ ಹೆಂಡತಿಯನ್ನು ದೊಣ್ಣೆಯಿಂದ ಹೊಡೆದು‌ ಕೊಲೆ ಮಾಡಿದ್ದಾನೆ. ಅನುಗೊಂಡನಹಳ್ಳಿ ಪೊಲೀಸರು‌ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

13/07/2022 09:20 am

Cinque Terre

6.26 K

Cinque Terre

0