ಬೆಂಗಳೂರು: ಶಾರ್ಟ್ ಟೈಂನಲ್ಲಿ ದುಡ್ಡು ಮಾಡ್ಬೇಕು, ತಿಂಗಳ ಸಂಬಳದಲ್ಲಿ ಬರೋ ಹಣ ಸಾಕಾಗ್ತಿಲ್ಲ ಅಂತ ಅಡ್ಡದಾರಿ ಹಿಡಿದಿದ್ದ ಯುವಕರು ಸದ್ಯ ಜೈಲು ಪಾಲಾಗಿದ್ದಾರೆ.
ಕೇರಳದಿಂದ ನಗರಕ್ಕೆ ಬಂದು ನೆಲಸಿದ್ದ ಶೋಬಿನ್ ,ಮಹಮ್ಮದ್. ದಿಲ್ಶಾದ್, ರೆಹಾನ್ ಎಲ್ರೂ ಕಳೆದ ಎರಡು ವರ್ಷಗಳಿಂದೆ ನಗರಕ್ಕೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. ಸಂಬಳದಲ್ಲಿ ಜೀವನ ನಡೆಸೋದು ಕಷ್ಟ ಅಂತ ಡ್ರಗ್ ದಂಧೆಗೆ ಇಳಿದಿದ್ರು. ಡ್ರಗ್ ವ್ಯಸನಿಗಳಾಗಿದ್ದ ಆರೋಪಿಗಳು ಕೊನೆಗೆ ಪರಿಚಯಸ್ತನಿಂದ 2-3 ಸಾವಿರಕ್ಕೆ ಡ್ರಗ್ ತರಿಸಿ 7-8 ಸಾವಿರಕ್ಕೆ ಡ್ರಗ್ ಮಾರಾಟ ಮಾಡ್ತಿದ್ರು.
ಬಾಗಲೂರಿನಲ್ಲಿ ಮನಡ ಮಾಡಿದ್ದ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಡ್ರಗ್ ಸಪ್ಲೈ ಮಾಡ್ತಿದ್ರು. ಸದ್ಯ ಸಿಸಿಬಿ ಅಧಿಕಾರಿಗಳು ನಾಲ್ವರು ಆರೋಪಿಗಳನ್ನ ಬಂಧಿಸಿ 11ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌ನ ಸೀಜ್ ಮಾಡಿದ್ದಾರೆ.
Kshetra Samachara
05/07/2022 09:21 pm