ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹರ್ಷ ಕೊಲೆ ಆರೋಪಿಗಳಿಗೆ ರಾಜಾತಿಥ್ಯ !; ಜೈಲ್‌ ನಲ್ಲೇ ಹಂತಕರ ಟಿಕ್ ಟಾಕ್ ಮಜಾ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆದರೆ, ಆರೋಪಿಗಳು ಜೈಲಿನಿಂದಲೇ ಕುಟುಂಬಸ್ಥರ ಜೊತೆಗೆ ಮಾತುಕತೆ tik tok ಮೋಜು ಮಸ್ತಿ ಮಾಡುವುದರ ಮೂಲಕ

ರಾಜಾತಿಥ್ಯ ನೀಡಲಾಗುತ್ತಿದೆಯೇ? ಅನ್ನೋ ಅನುಮಾನ ವ್ಯಕ್ತವಾಗಿದೆ.

ಇನ್ನು ಜೈಲಿನಲ್ಲಿಯೇ ಹಂತಕರು ತಮಗೆ ಬೇಕಾದವರಿಗೆ ಮತ್ತು ಸ್ನೇಹಿತರಿಗೆ ಮೆಸೇಜ್ ಚಾಟಿಂಗ್ ಮಾಡುತ್ತಾ ಪುಂಡಾಟ ಮೆರೆದಿದ್ದು, ಹಣಕ್ಕಾಗಿ ಡೀಲ್ ನಡೆದಿದೆಯಾ ಎಂಬ ಪ್ರಶ್ನೆಯೂ ಕಾಡುತಿದೆ.

ಟಿಕ್ ಟಾಕ್ ವೀಡಿಯೊ ನೋಡಿ ಪರಪ್ಪನ ಅಗ್ರಹಾರ ಪೊಲೀಸರು ಎರಡು ದಿನದ ಹಿಂದೆ ದೂರು ದಾಖಲಿಸಿ, ನಿನ್ನೆ ಬ್ಯಾರಕ್ 8ರ ಜೈಲಿನ ಮೇಲೆ ಪೊಲೀಸರು ದಾಳಿ ಕೂಡ ಮಾಡಿದ್ರು. ಸದ್ಯ ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರದಲ್ಲಿ ಕೇಸ್ ದಾಖಲಿಸಲಾಗಿದೆ.

ಇನ್ನು, ವಿಚಾರಣಾಧೀನ ಕೈದಿ ನಿಹಾರ್ ಅಲಿಯಾಸ್ ವಾಲಿಬಾ ಎಂಬಾತ ಮೊಬೈಲ್ ನೀಡಿರುವುದಾಗಿ ತಿಳಿದು ಬಂದಿದೆ. ಸದ್ಯ ಹಂತಕರು ಜೈಲಿನಿಂದಲೇ ರಂಜಾನ್ ಪ್ರಯುಕ್ತ ಕುಟುಂಬಸ್ಥರ ಜೊತೆಗೆ ಮಾತುಕತೆಯಾಡಿದ್ದಾರೆ.

ಆರೋಪಿಗಳಾದ ಮಹಮ್ಮದ್ ಖಾಸಿಫ್, ಸಯ್ಯದ್ ನದೀಮ್, ಸೈಯದ್ ಫಾರೂಕ್, ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್‌, ಅಬ್ದುಲ್ ಅಫಾನ್, ಮಹಮ್ಮದ್ ಇರ್ಫಾನ್, ಸಹೀದ್ ಉಲ್ಲಾ ಸಾರ್ಪಿ, ವಾಸಿಮ್ ಖಾನ್, ನಿಹಾರ್, ಮಗ್ದುಬ್ ಒಟ್ಟು 11 ಮಂದಿ ಮೇಲೆ ಕೇಸ್ ದಾಖಲಾಗಿದೆ. ಇದರಿಂದ ನಿಷ್ಠಾವಂತ ಅಧಿಕಾರಿಗಳ ಸಹಿತ ಪೊಲೀಸ್ ಇಲಾಖೆ ಮುಜುಗರಕ್ಕೆ ಒಳಗಾಗಿದೆ.

Edited By : Shivu K
PublicNext

PublicNext

04/07/2022 08:33 pm

Cinque Terre

46.35 K

Cinque Terre

3

ಸಂಬಂಧಿತ ಸುದ್ದಿ