ಬೆಂಗಳೂರು: ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬರ ಮನೆಗೆ ನುಗ್ಗಿದ ಹಂತಕರು, ಮಾರಕಾಸ್ತ್ರಗಳಿಂದ ಅಜ್ಜಿಯನ್ನು ಕೊಂದು ಹಾಕಿ, ಮೈಮೇಲಿದ್ದ ಚಿನ್ನಾಭರಣ ತೆಗೆದು ಪರಾರಿಯಾಗಿದ್ದಾರೆ.
ನಗರದ ಸಿ.ಕೆ. ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ನ ವಿನಾಯಕ ನಗರದಲ್ಲಿ ಘಟನೆ ನಡೆದಿದೆ. 75 ವರ್ಷದ ಯಶೋದಮ್ಮರನ್ನು ಬರ್ಬರವಾಗಿ ಹತ್ಯೆ ಮಾಡಿ ಕಿರಾತಕರು ಎಸ್ಕೇಪ್ ಆಗಿದ್ದಾರೆ.
ಹಲವು ವರ್ಷಗಳಿಂದ ವಿನಾಯಕನರದಲ್ಲಿ ವಾಸಿಸ್ತಿದ್ದ ಯಶೋದಮ್ಮಗೆ ಒಬ್ಬ ಮಗ ಮತ್ತು ಒಬ್ಬ ಮೊಮ್ಮಗ ಇದ್ದಾರೆ. ಅವರಿಬ್ರೂ ಬೇರೆಡೆ ವಾಸವಿದ್ರೆ ಈ 4 ಫ್ಲೋರ್ ಬಿಲ್ಡಿಂಗ್ ನ ಕೆಳಮಹಡಿಯಲ್ಲಿ ವೃದ್ಧೆ ವಾಸಿಸ್ತಿದ್ರು. ಹೀಗಿರೋವಾಗ ನಿನ್ನೆ ರಾತ್ರಿ 11.30-12 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಹಂತಕರು ವೃದ್ಧೆಗೆ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಮೈಮೇಲಿದ್ದ ಚಿನ್ನದ ಸರ, ಚಿನ್ನದ ಬಳೆಗಳನ್ನು ತಗೊಂಡು ಎಸ್ಕೇಪ್ ಆಗಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಮೇಲಿನ ಅಂತಸ್ತಿನಲ್ಲಿ ಬಾಡಿಗೆಗಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಖದೀಮರು ಮನೆಯಲ್ಲಿ ಮತ್ತಷ್ಟು ಚಿನ್ನಾಭರಣ, ಹಣ ದೋಚಿಕೊಂಡು ಹೋಗಿರೋ ಶಂಕೆಯಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
02/07/2022 10:47 pm