ಯಲಹಂಕ:ಅವನು ಓದಿರೋದು 8ನೇ ಕ್ಲಾಸ್ ಆದರೂ ಅಕ್ಕಪಕ್ಕದ ಮನೆಯವರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿ. ಆದ್ರೆ ಮಾಡ್ತಿದ್ದದ್ದು ಮಾತ್ರ ಮೋಸದ ಕೆಲಸ. ಹೌದು, ನಯವಾಗಿ ಮಾತನಾಡಿ ಸಹಾಯ ಮಾಡುವ ನೆಪದಲ್ಲಿ ಎಟಿಎಮ್ ಕಾರ್ಡ್ ಪಡೆದು ಲಕ್ಷ ಲಕ್ಷ ವಂಚಿಸುತ್ತಿದ್ದ ನಯವಂಚಕ ಈಗ ಜೈಲುಪಾಲಾಗಿದ್ದಾನೆ.
ಈ ವೀಡಿಯೋದಲ್ಲಿ ಕಾಣುವ ನೀಲಿ ಶರ್ಟ್ ಧರಿಸಿರೋ ವ್ಯಕ್ತಿ ಅಂತಿಂತ ವ್ಯಕ್ತಿ ಲ್ಲ. ಸರಿಯಾಗಿ ಎಟಿಎಮ್ನಲ್ಲಿ ಹಣ ಡ್ರಾ ಮಾಡಲು ಬಾರದ ವ್ಯಕ್ತಿಗೆ ಸಹಾಯ ಮಾಡೊ ನೆಪದಲ್ಲಿ ಬರ್ತಾನೆ ಈತ. ಹೇಗೆ ಹಿರಿಯ ನಾಗರಿಕನಿಂದ ಎಟಿಎಮ್ ಕಾರ್ಡ್, ಪಿನ್ ಪಡೆಯುತ್ತಾನೆ. ಹಣ ತೆಗೆದುಕೊಡುವಂತೆ ನಾಟಕವಾಡುತ್ತಾ, ಎಟಿಎಮ್ ಕಾರ್ಡ್ ಬದಲಿಸ್ತಾನೆ. ನಂತ್ರ ಹಣ ಬರ್ತಿಲ್ಲ ಅಂತ ಹಣ ಇರುವ ಕಾರ್ಡ್ ತೆಗೆದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡ್ತಾನೆ ನೋಡಿ. ಹೌದು, ಎಟಿಎಮ್ನಲ್ಲಿ ಹಣ ತೆಗೆಯಲು ಬಾರದವರನ್ನೇ ಟಾರ್ಗೆಟ್ ಮಾಡಿ, ಅವರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಪಡೆದು ಮೋಸ ಮಾಡ್ತಿದ್ದ ಈ ನಯವಂಚಕನನ್ನ ಈಶಾನ್ಯ ವಿಭಾಗದ CEN ಪೊಲೀಸರು ಬಂಧಿಸಿದ್ದಾರೆ.
ಅಟ್ಟೂರು ಲೇಔಟ್ನ ನಿವಾಸಿ ಮಲ್ಲಿನಾಥ್ ಅಂಗಡಿ ಈ ಬಂಧಿತ ಆರೋಪಿ. ಈತ ಓದಿದ್ದು 8ನೇ ಕ್ಲಾಸ್. ಮದುವೆಯಾಗಿ ಒಂದು ಮಗು ಸಹ ಇದೆ. ಮನೆಯಲ್ಲಿ ಹಾಗೂ ಅಕ್ಕಪಕ್ಕದವರಿಗೆ ಒಳ್ಳೆ ವ್ಯಕ್ತಿಯಂತೆ ಪೋಸ್ ಕೊಡೊ ಈತ ಮಾಡೋದು ಮಾತ್ರ ನಯವಂಚಕ ಕೆಲಸ.ಯಾರಿಗೆ ಎಟಿಎಮ್ನಲ್ಲಿ ಹಣ ಪಡೆಯುವ ಹಾಗೂ ಪಿನ್ ಬದಲಾಯಿಸುವ ಕುರಿತಾಗಿ ಮಾಹಿತಿ ಇರೋದಿಲ್ಲ. ಅಂತಹವರನ್ನೇ ಹುಡುಕಿ ಟಾರ್ಗೆಟ್ ಮಾಡ್ತಿದ್ದ. ನಂತ್ರ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಂದ ಎಟಿಮ್ ಕಾರ್ಡ್ ಹಾಗೂ ಪಿನ್ ಪಡೆದು, ನಕಲಿ ಕಾರ್ಡ್ ಕೊಟ್ಟು ಅಲ್ಲಿಂದ ಪರಾರಿಯಾಗ್ತಿದ್ದ. ನಂತ್ರ ಆ ಕಾರ್ಡ್ ಬಳಸಿ ಚಿನ್ನಾಭರಣ ಖರೀದಿಸಿ, ಅದನ್ನು ಬೇರೆ ಚಿನ್ನದ ಅಂಗಡಿಗಳಲ್ಲಿ ಅಡವಿಡ್ತಿದ್ದ. ಹೀಗೆ ಮೂರು ಜನಕ್ಕೆ ಆರೋಪಿ ಮೋಸ ಮಾಡಿದ್ದಾನೆ. ಪೊಲೀಸರು & ಜನ ಸಹ ATM ಬಳಿ ಎಚ್ಚರವಾಗಿರಬೇಕಿದೆ.
ನಿವೃತ್ತ ಸರ್ಕಾರಿ ನೌಕರ ರಾಮಕೃಷ್ಣೇಗೌಡ ಕಳೆದ ತಿಂಗಳು ಹೊಸ ಎಟಿಎಂ ಕಾರ್ಡ್ ಪಡೆದಿದ್ದರು. ಪಿನ್ ಜನರೇಟ್ ಮಾಡಲು ಎಟಿಎಮ್ಗೆ ಹೋದಾಗ ಮಲ್ಲಿನಾಥ್ ಅಲ್ಲಿರ್ತಾನೆ. ಪಿನ್ ಜನರೇಟ್ ಮಾಡಲು ಸಹಾಯ ಪಡೆಯುತ್ತಾರೆ. ಆಗ ಅವರಿಗೆ ಪಿನ್ ಜನರೇಟ್ ಮಾಡಿಕೊಟ್ಟು ಜತೆಗೆ 40 ಸಾವಿರ ಹಣ ಡ್ರಾ ಮಾಡಿಕೊಟ್ಟು ಎಟಿಎಮ್ ಕಾರ್ಡ್ ಬದಲಿಸಿ ಪರಾರಿಯಾಗಿದ್ದ. ಆ ಕಾರ್ಡಿನಲ್ಲಿದ್ದ 8.5 ಲಕ್ಷ ಹಣ ಡ್ರಾ ಮಾಡಿ 3 ಕತ್ತಿನ ಸರ, 3 ಕೈಉಂಗುರ, ಒಟ್ಟು 75ಗ್ರಾಂ ಚಿನ್ನಾಭರಣ ಖರೀದಿಸಿದ್ದ. ಇದೀಗ ಪೊಲೀಸ್ರು 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಎಟಿಎಮ್ ಕಾರ್ಡ್, ಒಂದು ಮೊಬೈಲ್ ಅನ್ನ ವಶಕ್ಕೆ ಪಡೆದು ಮಲ್ಲಿನಾಥ್ ನನ್ನು ಜೈಲಿಗಟ್ಟಿದ್ದಾರೆ.
PublicNext
02/07/2022 10:36 pm