ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಎಟಿಎಂ'ನಲ್ಲಿ ಸಹಾಯ ಮಾಡುವ ನೆಪ ಹೇಳಿ ವಂಚಿಸುತ್ತಿದ್ದ ಖದೀಮ ಅರೆಸ್ಟ್

ಬೆಂಗಳೂರು: ಬೆಂಗಳೂರು ಉತ್ತರ ಯಲಹಂಕ ಸುತ್ತಾಮುತ್ತ ಎಟಿಎಂ ಕಾರ್ಡ್ ಬದಲಾಯಿಸಿ ಜನರಿಗೆ ಮೋಸ ಮಾಡುತ್ತಿದ್ದ ಮಲ್ಲಿನಾಥ್ ಅಂಗಡಿ(32) ಎಂಬಾತನನ್ನು ಯಲಹಂಕದ ಸೆನ್ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಉಪನಗರ ವ್ಯಾಪ್ತಿಯ ಅಟ್ಟೂರಿನಲ್ಲಿ ಮಲ್ಲಿನಾಥ್ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ. ಕಳೆದ ಜೂನ್ ಮೊದಲ ವಾರದಲ್ಲಿ ದೂರುದಾರ ಕೆನರಾ ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದ. ನಂತರ ಎಟಿಎಂ ಕಾರ್ಡ್ ಪಿನ್ ಸೆಟ್ ಮಾಡುವಾಗ ಗಮನಿಸುತ್ತಿದ್ದ ಆಸಾಮಿ ಪಿನ್ ಬದಲಿಸಿಕೊಟ್ಟು, ಇವರ ಎಟಿಎಂ ಕಾರ್ಡ್ ರೀತಿಯ ಮತ್ತೊಂದು ಎಟಿಎಂ ಕಾರ್ಡ್ ಕೊಟ್ಟು ಕಳುಹಿಸಿದ್ದ. ಹಂತಹಂತವಾಗಿ ಒಟ್ಟು 8,51,534 ರುಪಾಯಿ ಹಣವನ್ನು ಬೇರೆ ಎಟಿಎಂ ಕಾರ್ಡ್ ಬಳಸಿ ಡ್ರಾಮಾಡಿಕೊಂಡಿದ್ದ.

ಇದು ಮೂಲ ಎಟಿಎಂ ಬಳಕೆದಾರನಿಗೆ ಗೊತ್ತಿರಲಿಲ್ಲ. ದೂರುದಾರ ಎಟಿಎಂ ಕಾರ್ಡ್ ಬದಲಾಗಿ ಒಂದು ವಾರದ ನಂತರ ದುಡ್ಡು ಡ್ರಾ ಮಾಡಲು ಬ್ಯಾಂಕಿಗೆ ಹೋದರೆ ಹಣ ಇರಲಿಲ್ಲ. ಬ್ಯಾಂಕಿನಲ್ಲಿ ಪರುಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ದೂರುದಾರ ಯಲಹಂಕದ ಸೆನ್ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ನೀಡಿದ್ದ. ಕೂಡಲೇ ಪೊಲೀಸರು ವಂಚಕನನ್ನು ಅಟ್ಟೂರು ಮನೆಯಲ್ಲಿ ಬಂಧಿಸಿದ್ದಾರೆ. ಈ ವಂಚಕ ಮಲ್ಲಿನಾಥ್ ಡ್ರಾಮಾಡಿದ್ದ ಹಣದಲ್ಲ ಮೂರು ಚಿನ್ನದ ಸರ, ಮೂರು ಉಂಗುರ ಒಟ್ಟು 75ಗ್ರಾಂ ಚಿನ್ನಾಭರಣ ಖರೀದಿಸಿದ್ದ. ಇದೀಗ ಚಿನ್ನಾಭರಣ ಸೇರಿ ಮೊಬೈಲ್ ಫೋನ್ ವಶಕ್ಕೆ ಪಡೆದು ಪೊಲೀಸರು ಮಲ್ಲಿನಾಥ್ ಅಂಗಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/07/2022 03:06 pm

Cinque Terre

2.76 K

Cinque Terre

0

ಸಂಬಂಧಿತ ಸುದ್ದಿ