ಆನೇಕಲ್: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ಅವರ ಗಂಡ ವಿಶೇಷಚೇತನ ವ್ಯಕ್ತಿ ನಾರಾಯಣಪ್ಪ ಮೇಲೆ ಚಾಕುವಿಂದ ಅಟ್ಯಾಕ್ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ನಡೆದಿದೆ. ಗರುಡ ಮಂಜು ಅಲಿಯಾಸ್ ಮಂಜುನಾಥ್ ಆರೋಪಿ.
ಮಾಯಸಂದ್ರ ಸಮೀಪದ ಹಳೇ ಹಳ್ಳಿ ಗ್ರಾಮಕ್ಕೆ ಇಂದು ಬೆಳಿಗ್ಗೆ 9ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದ ಗರುಡ ಮಂಜು, ನಾರಾಯಣಪ್ಪ ಅವರ ಮನೆಗೆ ನುಗ್ಗಿ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪಬ್ಲಿಕ್ ನೆಕ್ಸ್ಟ್ ಗೆ ಲಭಿಸಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಗರುಡ ಮಂಜನಿಗೆ ಮಾಟಮಂತ್ರ ಮಾಡಿಸಿದ ಆರೋಪದ ಮೇಲೆ ನಾರಾಯಣಪ್ಪ ಮೇಲೆ ಅಟ್ಯಾಕ್ ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ತಿಗಳ ಸಮುದಾಯದ ವಿಚಾರದಲ್ಲಿಯೂ ಗಲಾಟೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/07/2022 10:41 pm