ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಣ್ಣು ಮಗು ಅಂತ ಕತ್ತು ಹಿಸುಕಿ ಸಾಯಿಸಲು ಮುಂದಾದ ಪಾಪಿ ತಂದೆ- ಆರೋಪಿ ಅರೆಸ್ಟ್

ಬೆಂಗಳೂರು: ಹೆಣ್ಣು ಮನೆಯ ಕಣ್ಣು, ಹೆಣ್ಣು ಮಗು ಹುಟ್ಟಿದ್ರೆ ಮನೆಗೆ ಲಕ್ಷ್ಮೀನೆ ಬಂದಿದ್ದಾಳೆ ಅಂದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ಪಾಪಿ ತಂದೆ ಹೆಣ್ಣು‌ಮಗು ಎಂಬ ಕಾರಣಕ್ಕಾಗಿ ಮನೆಗೆ ಬಂದು ಮಗಳ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಮಗುವಿನ ಹತ್ಯೆಗೆ ಮುಂದಾಗಿದ್ದ ಪಾಪಿ ತಂದೆಯನ್ನ ಹೆಚ್ ಎಎಲ್ ಪೊಲೀಸರು ಬಂಧಿಸಿ‌ ಜೈಲಿಗಟ್ಟಿದ್ದಾರೆ‌.

ತೆಲಂಗಾಣದ ಪ್ರಕಾಶಂ‌ ಜಿಲ್ಲೆಯ ವೆಂಕಟೇಶ್ವರ್ ರಾವ್ ಬಂಧಿತ ಆರೋಪಿ.‌ ವೆಂಕಟೇಶ್ವರ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದ. ಆರೋಪಿ 2016 ರಲ್ಲಿ ನಯನ ಜೊತೆ ವಿವಾಹವಾಗಿದ್ದ. ದಂಪತಿಗೆ ಈಗಾಗಲೇ ಐದು ವರ್ಷದ ಹೆಣ್ಣು ಮಗುವಿದ್ದು ಕಳೆದ 10 ದಿನಗಳ ಹಿಂದೆ ಎರಡನೇ ಹೆಣ್ಣು ಮಗು ಹುಟ್ಟಿದೆ.

ಎರಡನೇ ಮಗುವಾದ ಬಳಿಕ ಹೆಂಡ್ತಿ ಮನೆಗೆ ಬಂದಿದ್ದ ಪತಿ ವೆಂಕಟೇಶ್ವರ ರಾವ್ ಮಗುವಿನ ವಿಚಾರದಲ್ಲಿ ಜಗಳವಾಡಿ ಅಸಮಾಧಾನ ತೋಡಿಕೊಂಡಿದ್ದ. ಮೊದಲ ಮಗಳ ನೋಡಿ ಕತ್ತು ಹಿಸುಕಿ ಸಾಯಿಸಲು ಮುಂದಾಗಿದ್ದ. ಇದನ್ನು ಗಮನಿಸಿದ್ದ ಪತ್ನಿ, ಪೊಲೀಸರಿಗೆ ದೂರು‌ ನೀಡಿದ್ರು. ಅಲ್ಲದೇ ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ರೂ ಎಂದೂ ದೂರಲಾಗಿದೆ.

Edited By : Vijay Kumar
PublicNext

PublicNext

27/06/2022 06:38 pm

Cinque Terre

23.15 K

Cinque Terre

0

ಸಂಬಂಧಿತ ಸುದ್ದಿ