ಬೆಂಗಳೂರು:ಇಷ್ಟು ದಿನ ತೆರೆಮರೆಯಲ್ಲಿ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಳ್ಳುತ್ತಿದ್ದ ಬೆಂಗಳೂರಿನ ಸೋಕಾಲ್ಡ್ ಡಾನ್ ಗಳು ಈಗ ಬಿಜೆಪಿಯ ರಾಷ್ಟ್ರ ನಾಯಕರಿಗೆ ಹಾರ ಪೇಟ ಹಾಕಿ ರಾಜರೋಷವಾಗಿ ಗುರುತಿಸಿಕೊಂಡಿದ್ದಾರೆ.
ಸೈಲೆಂಟ್ ಸುನೀಲ್ ಈ ಹೆಸ್ರು ಬೆಂಗಳೂರು ಭೂಗತ ಜಗತ್ತಿನಲ್ಲಿ ಸಾಕಷ್ಟು ಸೌಂಡ್ ಮಾಡಿರೋ ಹೆಸ್ರು. ಬಿಜೆಪಿ ಶಾಸಕರ ಆಶ್ರಯದಲ್ಲಿರೋ ಸುನೀಲ್ ಮತ್ತು ಒಂಟೆ ಇಷ್ಟು ದಿನ ಸೈಲೆಂಟ್ ಆಗಿ ತೆರೆಮರಡಯಲ್ಲಿ ತಮ್ಮ ಹೆಸರು ಬಳಸಿ ಕೆಲಸ ಮಾಡ್ತಿದ್ರು. ಸದ್ಯ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾಗಿರೋ ನಟ ಜಗ್ಗೇಶ್ ಗೆ ಹಾರ ತುರಾಯಿ ಹಾಕಿ ರಾಜಾರೋಷವಾಗೆ ಫೋಟೊ ಗೆ ಪೋಸ್ ನೀಡಿದ್ದಾರೆ. ಇಡಿ ಬೆಂಗಳೂರಿನ ಕಸದ ಡೀಲಿಂಗ್ ನಡೆಸ್ತಿರೋ ಸುನೀಲ ತನ್ನ ಹೆಸ್ರಲ್ಲೆ ಸಾಕಷ್ಟು ಡೀಲಿಂಗ್ ಮಾಡ್ತಾ ಕತ್ತಲ ಲೋಕದ ಸಾಮ್ರಾಟನಾಗಿದ್ದಾನೆ.
ರೌಡಿಗಳನ್ನ ಮಟ್ಟ ಹಾಕ್ತಿವಿ ರೌಡಿಸಂ ಬೆಳೆಯೋಕೆ ಬಿಡಲ್ಲ ಅಂತಿದ್ದ ಬಿಜೆಪಿ ನಾಯಕರು ಹೀಗೆ ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡು ಫೋಟೊಗೆ ಫೋಸ್ ಕೊಟ್ಟಿರೋದು ನೋಡಿದ್ರೆ ರೌಡಿಗಳಿಗೆ ಇವ್ರೆ ಕುಮ್ಮಕ್ಕು ನೀಡಿ ಬೆಳೆಸ್ತಿದ್ದಾರ ಅನ್ನೋ ಅನುಮಾನ ಮೂಡಿದೆ. ಅದ್ರಲ್ಲೂ ಸದ್ಯ ರಾಷ್ಟ್ರ ಮಟ್ಟದ ನಾಯಕರಾಗಿರೋ ಜಗ್ಗೇಶ್ ಭೂಗತ ಲೋಕದ ರೌಡಿಗಳ ಜೊತೆ ಹಲ್ಲು ಕಿರಿದು ನಿಂತು ಫೋಸ್ ಕೊಟ್ಟಿರೋದು ನೋಡಿದ್ರೆ ನಿಜಕ್ಕೂ ವಿಪಾರ್ಯಾಸ ಅನಿಸುತ್ತೆ.
PublicNext
25/06/2022 10:48 pm