ಬೆಂಗಳೂರು: ನಕಲಿ ಸಿಮ್‌ಕಾರ್ಡ್ ಮತ್ತು ನಕಲಿ ಬ್ಯಾಂಕ್ ಖಾತೆ ತೆರೆದು ಜನರಿಗೆ ವಂಚಿಸುತ್ತಿದ್ದ ತ್ರಿಪುರ ರಾಜ್ಯ ವ್ಯಕ್ತಿ ಹಾಗೂ ಇಬ್ಬರು ಆಫ್ರಿಕಾ ಮೂಲದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ತ್ರಿಪುರಾ ರಾಜ್ಯದ ಮೋನಿ ಕುಮಾರ್ ಕಾಮ್ ಪೆಂಗ್ ಹಾಗೂ ಆಫ್ರಿಕಾ ಮೂಲದ ಫಾಸೋಯಿನ್ ಅವಲೋಹೋ ಅಡೇಯಿಂಕಾ ಮತ್ತು ಅಡ್ಜೇ ಅಂಗೇ ಅಲ್ಫ್ರೇಡ್ ಅಡೋನಿ ಎಂಬ ಖದೀಮರನ್ನ ಬಂಧಿಸಲಾಗಿದೆ. ತ್ರಿಪುರದ ಮೋನಿ ಕುನಾರ್‌ನಿಂದ ನಕಲಿ ಸಿಮ್‌ಕಾರ್ಡ್, ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್‌ಗಳನ್ನ ಕೊರಿಯರ್‌ನಲ್ಲಿ ತರೆಸಿಕೊಳ್ಳುತ್ತಿದ್ದ ಆರೋಪಿಗಳು, ಆ ನಂಬರ್‌ಗಳಿಂದ ಜನರಿಗೆ ಕರೆ ಮಾಡಿ ಉದ್ಯೋಗ, ಲೋನ್ ಕೊಡಿಸುವ, ಲಾಟರಿ, ಗಿಫ್ಟ್ ಬಂದಿದೆ ಎಂದು ಜನರನ್ನು ಮರಳು ಮಾಡುತ್ತಿದ್ದರು. ಯಾರಾದ್ರು ಯಾಮಾರಿದರೆ ಅವರಿಂದ ಹಣ ಹಾಕಿಸಿಕೊಂಡು ಸಿಮ್‌ಕಾರ್ಡ್ ಬ್ಲಾಕ್ ಮಾಡಿಕೊಳ್ಳುತ್ತಿದ್ದರು.
ಪಾಸ್‌ಪೋರ್ಟ್, ವೀಸಾ ಇಲ್ಲದೆ ಅಕ್ರಮವಾಗಿ ಭಾರತದಲ್ಲಿ ನೆಲಸಿ ವಂಚನೆಯ ಕೃತ್ಯ ಎಸಗುತ್ತಿದ್ದ ಆರೋಪಿಗಳ ತೀವ್ರವಾಗಿ ವಿಚಾರಣೆ ನಡೆಸಿದಾಗ ಜನರಿಗೆ ಅನೇಕ ದಿನಗಳಿಂದ ವಂಚಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು 5 ನಕಲಿ ಸಿಮ್‌ಕಾರ್ಡ್, 6 ನಕಲಿ ಬ್ಯಾಂಕ್‌ನ ಡೆಬಿಟ್ ಕಾರ್ಡ್, 4 ಮೊಬೈಲ್ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದ್ದಾರೆ.
Kshetra Samachara
24/06/2022 08:45 pm