ಬೆಂಗಳೂರು: ಸುಂಕದಕಟ್ಟೆ ಆಸಿಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಡ್ ಸಂತ್ರಸ್ತೆಯ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದೆ. ಇನ್ನೂ ಕೂಡ ICU ನಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಸಂತ್ರಸ್ತೆಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ಆರೋಗ್ಯ ಕೊಂಚ ಸುಧಾರಣೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಒಂದೇ ಕಡೆ ಮುಖಮಾಡಿ ಮಲಗಿರುವ ಯುವತಿಗೆ ಕೆಲವು ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕೆಂದು ವೈದ್ಯರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ ಯುವತಿಯ ದೊಡ್ಡಪ್ಪ ಶಂಕರ್, ಮಗಳ ಸ್ಥಿತಿ ಶಸ್ತ್ರಚಿಕಿತ್ಸೆಯ ನಂತರ ಕೊಂಚ ಸುಧಾರಣೆಗೊಂಡಿದೆ. ಮತ್ತು ನಮ್ಮ ಜೊತೆ ಮಾತನಾಡಿದ್ದಾಳೆ. ಆದರೆ ನಮಗೆ ನಮ್ಮ ಮಗಳ ಸ್ಥಿತಿ ನೋಡಲಾಗುತ್ತಿಲ್ಲ ಎಂದು ಪಬ್ಲಿಕ್ ನೆಕ್ಸ್ಟ್ ಗೆ ಅಳಲು ತೋಡಿಕೊಂಡಿದ್ದಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
23/06/2022 06:35 pm