ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಲೇಜ್ ಡೇ ವಿದ್ಯುತ್ ಸ್ಪರ್ಶ,ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

ಯಲಹಂಕ: ಸಮೀಪ M.S.ಪಾಳ್ಯದ ಸಂಭ್ರಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 17 ರಂದು ನಡೆದ ಕಾಲೇಜ್ ಡೇ ದುರಂತ ಸಂಭವಿಸಿದೆ. ಕಾಲೇಜಿನಲ್ಲಿ‌ ಫೈನಲ್ ಇಯರ್ ಕಂಪ್ಯೂಟರ್ ಸೈನ್ಸ್ ಓದ್ತಿದ್ದ ಅಶುತೋಷ್ (22) ಎಂಬ ವಿದ್ಯಾರ್ಥಿ ಕರೆಂಟ್ ವೈರ್ ತುಳಿದು ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಕಾಲೇಜಿನಲ್ಲಿ ನಡೆಯುತ್ತಿದ್ದ ಕಾಲೇಜ್ ಡೇ ಪ್ರಯುಕ್ತ ಕಲ್ಚರಲ್ ಕಾರ್ಯಕ್ರಮ‌ ನಡೆಯುತ್ತಿತ್ತು. ಇದರ ಪ್ರಯುಕ್ತ ಈವೆಂಟ್ ಮ್ಯಾನೇಜ್ಮೆಂಟ್ ನವರು ಸ್ಟೇಜ್ & ಸೌಂಡ್ ಸಿಸ್ಟಮ್ ಅಳವಡಿಕೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ರಾತ್ರಿ ಸುಮಾರು 8 ಗಂಟೆ ವೇಳೆ ವಿದ್ಯುತ್ ಪ್ರವಹಿಸಿ ಅಶುತೋಷ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಅಶುತೋಷ್ ಪೋಷಕರು ದಾಸರಹಳ್ಳಿ ಇಂಡಿಯನ್ ಏರ್ಪೋಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನ ಸಾವಿನಿಂದ ಕಂಗಾಲಾಗಿ, ಸಂಭ್ರಮ್ ಇಂಜಿನಿಯರಿಂಗ್ ಕಾಲೇಜ್ ಮ್ಯಾನೇಜ್ಮೆಂಟ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ FIR ದಾಖಲಿಸಿದ್ದಾರೆ.

ಈವೆಂಟ್ ಮ್ಯಾನೇಜ್ಮೆಂಟ್ ಮ್ಯಾನೇಜರ್ ನವೀನ್ ನನ್ನು ಘಟನೆ ಹಿನ್ನೆಲೆ‌ ಬಂಧಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ‌ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ ಎಂದು DCP ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

SureshBabu Public Next ಯಲಹಂಕ

Edited By : Nagesh Gaonkar
PublicNext

PublicNext

21/06/2022 10:32 pm

Cinque Terre

44.41 K

Cinque Terre

0

ಸಂಬಂಧಿತ ಸುದ್ದಿ