ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟಿ ಕೋಟಿ ಬ್ಯುಸಿನೆಸ್ ಮಾಡ್ತಿದ್ದ ಲೇಡಿ : ಪೊಲೀಸ್ರ ಬಲೆಗೆ ಬಿದ್ದಾಗ ಕೂಲಿ ಮಾಡ್ತಿದ್ದ ಕೋಟಿ ಲೇಡಿ

ಬೆಂಗಳೂರು:ಒಂದು ಟೈಮ್‌ ನಲ್ಲಿ ಕೋಟಿ ಕೋಟಿ ವ್ಯವಹಾರ ಮಾಡ್ತಿದ್ದವಳು ಪೊಲೀಸರಿಗೆ ಸಿಕ್ಕಾಗ ದಿನಗೂಲಿ ಕಲಸ ಮಾಡ್ತಿದ್ಳು. ಅರೇ ಇದೇನಪ್ಪ ಕೋಟಿ ಕೋಟಿ ಬ್ಯುಸಿನೆಸ್ ಮಾಡ್ತಿದ್ದವಳು ಕೂಲಿ‌ಕೆಲಸ ಯಾಕ್ ಮಾಡ್ತಿದ್ಳು ಅವ್ಳು ಪೊಲೀಸ್ರಿಗೆ ಲಾಕ್ ಆಗಿದ್ದೇಕೆ ಅನ್ನೋ ಡಿಟೈಲ್ ಇಲ್ಲಿದೆ.

ಎಸ್ ಲಕ್ಷ್ಮೀವಾಣಿ ಒಂದು ವರ್ಷದ ಹಿಂದೆ ವಾರಿಧಿ ಚಿಟ್ ಫಂಡ್ ನಲ್ಲಿ ಕೋಟಿ ಕೋಟಿ ವ್ಯವಹಾರ ನಡೆಸ್ತಿದ್ಳು. ಕೆಲ ದಿನಗಳಲ್ಲೇ ಇದೇ ಚಿಟ್ ಫಂಡ್ ನಲ್ಲಿ ಜನರಿಗೆ ಚೀಟಿಂಗ್ ಮಾಡಿ ತಲೆಮರೆಸಿಕೊಂಡಿದ್ಳು. ಸದ್ಯ ಈ ಲಕ್ಚ್ಮೀವಾಣಿಯನ್ನ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಮೊದಲು ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈ.ಲಿ. ಪ್ರಾರಂಭಿಸಿದ್ದ ಲಕ್ಷ್ಮೀ ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ಳು.ತನ್ನ ಗಂಡನನ್ನೆ ಮ್ಯಾನೆಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ಓಪನ್ ಮಾಡಿದ್ದ ಲಕ್ಷ್ಮೀ ಚಿಟ್ ಫಂಡ್ ಕಂಪನಿಗೆ ಕೆಲಸಗಾರರನ್ನ ನೇಮಕ ಮಾಡಿಕೊಂಡು ನಂತರ ಇವ್ರಿಗೆ ಗೊತ್ತಿಲ್ಲದ್ದಂತೆ ಕೆಲಸಗಾರಗಾರನ್ನೆ ಡೈರೆಕ್ಟರ್ ಗಳಾಗಿ ಮಾಡಿ ಜನರಿಗೆ ಪರಿಚಯ ಮಾಡಿಸ್ತಿದ್ಳು.

ವೃದ್ಧರನ್ನೆ ಟಾರ್ಗೇಟ್ ಮಾಡ್ತಿದ್ದ ಲಕ್ಷ್ಮೀ ಬಳಿ ಹಣ ಕಲೆಕ್ಟ್ ಮಾಡ್ತಿದ್ಳು. ಬೃಂದಾವನ ಫ್ರಾಡ್ ಕೇಸ್ ಬೆನ್ನಲ್ಲೇ ರಾಜಾಜಿನಗರ ಠಾಣೆಗೆ ಈ ಚಿಟ್ ಫಂಡ್ ವಿಚಾರವಾಗಿ ದೂರು ನೀಡಿದ್ರು. ಕೇಸ್ ದಾಖಲಾಗ್ತಿದ್ದಂತೆ ಎಸ್ಕೇಪ್‌ ಲಕ್ಷ್ಮೀವಾಣಿಯನ್ನ ಸತತವಾಗಿ ಹುಡುಕಾಟ ನಡೆಸಿದ್ದ ರಾಜಾಜಿನಗರ ಪೊಲೀಸರು ಕೊನೆಗೂ ಲಕ್ಷ್ಮೀಯನ್ನ ಪತ್ತೆಮಾಡಿದ್ದಾರೆ.

ವಿಪರ್ಯಾಸ ಅಂದ್ರೆ ಲಕ್ಷ್ಮೀ ಜೀವನ ನಿರ್ವಹಣೆಗಾಗಿಕಲ್ಯಾಣಮಂಟಪವೊಂದರಲ್ಲಿ ಕೆಲಸ ಮಾಡಿಕೊಂಡು ಉಳಿದು ಕೊಂಡಿದ್ಳು. ಸಒಂದು ವರ್ಷದ ಬಳಿಕ ಖಾಕಿ ಬಲೆಗೆ ಲಕ್ಷ್ಮೀ ಬಿದ್ದಿದ್ದು ಕಳೆದ ಆಗಸ್ಟ್ ನಲ್ಲಿ ಲಕ್ಷ್ಮೀ ವಿರುದ್ಧ ದೂರು ದಾಖಲಾಗಿತ್ತು.

Edited By : PublicNext Desk
Kshetra Samachara

Kshetra Samachara

21/06/2022 11:48 am

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ