ಬೆಂಗಳೂರು: ಶೌಚಾಲಯಕ್ಕೆ ಹೋಗಬೇಕು ಅಂತ ನೆಪ ಹೇಳಿ ಕಸ್ಟಡಿಯಲ್ಲಿದ್ದ ಬಾಲಾಪರಾಧಿ ಬಾಲಕಿ ಮಹಿಳಾ ಕಾನ್‌ಸ್ಟೇಬಲ್ ತಳ್ಳಿ ಎಸ್ಕೇಪ್ ಆಗಿದ್ದಾಳೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಇತ್ತೀಚೆಗೆ ಬಾಲಕಿ ಕಾಣೆಯಾಗಿದ್ದು ಪ್ರಕಾಶ್ ಎಂಬಾತ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ಪತ್ತೆ ಹಚ್ಚಿದ್ದರು. ಸಿದ್ದಾಪುರದಲ್ಲಿರುವ ಬಾಲಮಂದಿರದಲ್ಲಿ ಬಿಟ್ಟಿದ್ದರು.
ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಲಕಿ ತಂದೆಯು ಆರೋಪಿಸಿದ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆಯಾ ಎಂಬುದರ ಬಗ್ಗೆ ಪರೀಕ್ಷೆ ನಡೆಸಲು ಪಡಿಸಲು ಮಹಿಳಾ ಪಿಸಿ ಜೊತೆಗೆ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಿದ್ದರು.
ವೈದ್ಯಕೀಯ ಪರೀಕ್ಷೆ ಬಳಿಕ ಮತ್ತೆ ಕೆಲವು ಟೆಸ್ಟ್ ಮಾಡಬೇಕೆಂದು ಹೇಳಿ ಮತ್ತೊಂದು ದಿನ ಕರೆದುಕೊಂಡು ಬರುವಂತೆ ವೈದ್ಯರು ಸೂಚಿಸಿದ್ದರು. ಬಾಲಕಿಯನ್ನು ವಾಪಸ್ ಬಾಲಮಂದಿರಕ್ಕೆ ಕರೆದೊಯ್ಯವಾಗ ಬಾಲಕಿಯು ನನಗೆ ವಾಂತಿ ಬರುತ್ತಿದ್ದು ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ಸಮಯ ನೋಡಿ ಮಹಿಳಾ ಪಿಸಿಯನ್ನ ಬ್ಯಾರಿಕೇಡ್ ಮೇಲೆ ತಳ್ಳಿ ಎಸ್ಕೇಪ್ ಆಗಿದ್ದಾಳೆ.
PublicNext
20/06/2022 02:10 pm