ನೆಲಮಂಗಲ: ಇಂದು ಮುಂಜಾನೆಯೇ ಕೆರೆ ದಡದಲ್ಲಿ ಒಂದು ಟ್ರಾವೆಲರ್ ಸೂಟ್ ಕೇಸ್ ತೇಲ್ತಿತ್ತು. ಇದೇನಪ್ಪಾ ಒಳ್ಳೆ ಬ್ರಾಂಡೆಡ್ ಬ್ಯಾಗ್ ತೇಲ್ತಾ ಇದೆ ಅಂತ ಗ್ರಾಮಸ್ಥರು ಕುತೂಹಲದಿಂದ ಇದ್ರು. ಏನಿದೆ ಅಂತಾ ನೋಡಿದಾಗ ಉಸಿರು ನಿಲ್ಲೋದೊಂದೇ ಬಾಕಿ, ಅಷ್ಟಕ್ಕೂ ಅದ್ರಲ್ಲಿ ಇದ್ದಿದ್ದಾದ್ರು ಏನು!? ಈ ಸ್ಟೋರಿ ನೋಡಿ...
ಏನಿದು ಅಂತಾ ನೋಡಿದ್ರೆ ವೇಲ್ ನಲ್ಲಿ ಕೈಕಾಲು ಬಿಗಿದಿರೋ ಸುಮಾರು 35ರ ಹರೆಯದ ಕೊಳೆತ ಮಹಿಳೆ ಶವ! ಶ್ವಾನದಳ ಹಾಗೂ ಪೊಲೀಸ್ರಿಂದ ಪರಿಶೀಲನೆ. ಹೌದು... ಈ ದೃಶ್ಯವೆಲ್ಲ ಕಂಡು ಬಂದಿದ್ದು, ನೆಲಮಂಗಲ ತಾಲೂಕು ದಾಬಸ್‌ಪೇಟೆ ಠಾಣೆ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದ ಕೆರೆಯಲ್ಲಿ.
ಎಸ್, ಗ್ರಾಮಸ್ಥರು ಕೂಡಲೇ ಪೊಲೀಸ್ರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಲು ಮುಂದಾಗ್ತಿದ್ಹಾಗೆ ಮಹಿಳೆಯನ್ನ ಬೇರೆಲ್ಲೋ ಕೊಲೆಗೈದು ಇಲ್ಲಿ ಬಿಸಾಡಿದ್ದಾರೆ ಎಂದು ಶಂಕಿಸಿದ್ದಾರೆ. ಶ್ವಾನದಳ, ವಿಧಿವಿಜ್ಞಾನ ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಸದ್ಯ, ಕೇಸು ದಾಖಲಿಸಿದ ಪೊಲೀಸ್ರು, ಟ್ರಾವೆಲ್ ಬ್ಯಾಗ್ ಮೇಲಿರೋ ಬಾರ್ ಕೋಡ್ ಆಧಾರದ ಮೇಲೆ ವಿಮಾನ ಯಾನ ಸಂಸ್ಥೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೂ ಕಣ್ಣಿಟ್ಟಿದ್ದು, ಪ್ರಕರಣ ಬೇಧಿಸಲು 3 ವಿಶೇಷ ತಂಡ ರಚಿಸಿ, ತನಿಖೆಗೆ ಮುಂದಾಗಿದ್ದಾರೆ.
PublicNext
14/06/2022 09:31 pm