ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಕ್ರಮದಲ್ಲೊಂದು ಅಕ್ರಮದ ಅನುಮಾನಕ್ಕೆ ಓರಿಸ್ಸಾದ ಮಹಿಳೆ ಬೆಂಗಳೂರಲ್ಲಿ ಕೊಲೆ

ಒರಿಸ್ಸಾ ಮೂಲದ ಮಹಿಳೆ ನಗರದ ಲಾಡ್ಜ್‌ನಲ್ಲಿ ಕೊಲೆಯಾಗಿರೋ ಘಟನೆ ಬೆಳಕಿಗೆ ಬಂದಿದೆ. ಕಳೆ ೧೦ನೇ ತಾರೀಖು ಯಶವಂತಪುರದ ಬೆಂಗಳೂರು ರೆಸಿಡೆನ್ಸಿ ಲಾಡ್ಜ್‌ನಲ್ಲಿ ಒರಿಸ್ಸಾದ ದೀಪಾ ಪದನ್ ಕೊಲೆಯಾಗಿದ್ದಾಳೆ. ಕೊಲೆ ಬಳಿಕ ಆರೋಪಿ ಅನ್ಮಲ್ ರತನ್ ಕಂದರ್ ಎಸ್ಕೇಪ್ ಆಗಿದ್ದು ಪೊಲೀಸ್ರು ಹುಡುಕಾಟ ನಡೆಸ್ತಿದ್ದಾರೆ. ಆರೋಪಿ ಮತ್ತು ಕೊಲೆಯಾದ ದೀಪಾ ಇಬ್ರು ಒರಿಸ್ಸಾ ಮೂಲದವರು. ಇಬ್ಬರು ಕೂಡ ಬೇರೆ ಬೇರೆ‌ ಮದುವೆಯಾಗಿದ್ದರೂ ಅಕ್ರಮ ಸಂಬಂಧ ಹೊಂದಿದ್ರು. ಆದರೆ ದೀಪಾ ಪದನ್ ಮತ್ತೊಬ್ಬನ ಜೊತೆ ಕೂಡ ಅಕ್ರಮ‌ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿದ ಪ್ರಿಯಕರ ಔಟಿಂಗ್ ನೆಪದಲ್ಲಿ ಬೆಂಗಳೂರಿಗೆ ಕರೆತಂದಿದ್ದ. ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಇದೇ ವಿಚಾರಕ್ಕೆ ಕಿರಿಕ್ ತೆಗೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮೇಲ್ನೋಟಕ್ಕೆ ವಿಷ ಕುಡಿಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅನುಮಾನವನ್ನ ಪೊಲೀಸ್ರು ವ್ಯಕ್ತಪಡಿಸಿದ್ದಾರೆ. ಬಾಯಿ, ಮೂಗಿನಿಂದ ರಕ್ತ ಹಾಗೂ ನೊರೆ ಬಂದಿದ್ದರಿಂದ ವಿಷಪ್ರಾಶನ ಅನುಮಾನ ವ್ಯಕ್ತವಾಗಿದ್ದು ಪೋಸ್ಟ್ ಮಾರ್ಟಂ ವರದಿ ಬಳಿಕ ಕೊಲೆಯ ಅಸಲಿ ಸತ್ಯ ಬಯಲಾಗಲಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಿರೋ ಪೊಲೀಸ್ರು ಆರೋಪಿ ಪತ್ತೆಗೂ ಬಲೆ ಬೀಸಿದ್ದಾರೆ.

Edited By :
PublicNext

PublicNext

13/06/2022 04:23 pm

Cinque Terre

40.56 K

Cinque Terre

0

ಸಂಬಂಧಿತ ಸುದ್ದಿ