ಬೆಂಗಳೂರು : ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಸ್ತಾನ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮತ್ತೊಬ್ಬ ಬಾಲಾಪರಾಧಿಯಾಗಿದ್ದು, ಆರೋಪಿತರು
ಜೆ.ಜೆ ನಗರ, ಕೆ.ಜಿ ಹಳ್ಳಿ, ವಿಜಯನಗರ, ರಾಮಮೂರ್ತಿನಗರ ಸೇರಿದಂತೆ ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳುವು ಮಾಡಿದ್ದ ಆರೋಪಿಗಳು ಮೇ 25ರಂದು ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಚೋಳೂರುಪಾಳ್ಯದಲ್ಲಿ ಮಹಮ್ಮದ್ ಖುರ್ಷಿದ್ ಆಲಂ ಎಂಬುವವರ ದ್ವಿಚಕ್ರ ವಾಹನ ಕದ್ದಿದ್ರು.
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿ 5 ಲಕ್ಷ ಬೆಲೆ ಬಾಳುವ 11 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
Kshetra Samachara
11/06/2022 03:39 pm