ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ದಿನವೇ ಗೃಹಿಣಿ ನೇಣಿಗೆ ಶರಣು!

ನೆಲಮಂಗಲ: ಆಕೆ ಮುದ್ದಿನಂತ ಮನಸಿನ ಚೆಲುವೆ, ಒಬ್ಬನೇ ಮಗ ಚೆನ್ನಾಗಿ ನೋಡ್ಕೊತ್ತಾನೆ ಅಂತಾ ಆಕೆಯ ಹೆತ್ತವರು ಅವಳನ್ನ ಮದುವೆ ಮಾಡಿಕೊಟ್ಟಿದ್ರು, ಕೋವಿಡ್ ಇದ್ದ ಕಾರಣ ಕಲ್ಯಾಣ ಮಂಟಪದಲ್ಲಿ ನಿಶ್ಚಯವಾಗಿದ್ದ ವಿವಾಹ ದೇವಸ್ಥಾನದಲ್ಲೇ ನಡೆದದ್ದೆ ನೋಡಿ ಎಡವಟ್ಟು, ಸಂಸಾರ ಸಾಗರದಲ್ಲಿ ತೇಲಬೇಕಿದ್ದ ಆಕೆ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೀಗೆ ಏರಿಯಾದಲ್ಲಿ ಏನಾಗ್ತಿದೆ ಅಂತ ಕುತೂಹಲದಿಂದ ನೋಡ್ತಿರೋ ಜನ, ಇದ್ದಕ್ಕಿದಾಗೆ ಮನೆಯೊಂದ್ರಲ್ಲಿ ಪೊಲೀಸ್ರಿಂದ ಪರಿಶೀಲನೆ, ಮನೆಯ ಒಳಗಡೆ ಇಂಚಿಂಚು ಬಿಡದೆ ತಲಾಷ್, ಇತ್ತ ಆಸ್ಪತ್ರೆ ಶವಾಗಾರದ ಬಳಿ ಹೆತ್ತವರ ಆಕ್ರಂದನ, ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದು ಒಂದು ಆತ್ಮಹತ್ಯೆ. ಹೌದು ಈ ಫೋಟೋದಲ್ಲಿ ಕಾಣ್ತಿರೋ ಈಕೆ 22 ವರ್ಷದ ಪೂಜಾ, ಕುಣಿಗಲ್ ಮೂಲದ ಪೂಜಾ ಕಳೆದ ಎರಡುವರೆ ವರ್ಷದ ಹಿಂದೆ ನೆಲಮಂಗಲದ ಮಂಜುನಾಥ್ ಎಂಬುವನೊಂದಿಗೆ ಮದುವೆ ಆಗಿದ್ದಳು. ಮನೆಯಲ್ಲಿನ ಸಣ್ಣ ಪುಟ್ಟ ಮನಸ್ಥಾಪಗಳಿಗೆ ಬೇಸತ್ತು ಹೊಸ ಮನೆ ಮಾಡಿ ಹಾಲುಕ್ಕಿಸಿದ ಮರು ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೌದು ಮೃತ ಪೂಜಾ ಪೋಷಕರು ಕೋವಿಡ್‌ನ‌ ಮೊದಲನೇ ಅಲೆಯ ಮುನ್ನಾ ಮದುವೆ ಗೊತ್ತು ಮಾಡಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಲಿದ್ದರು. ಆದ್ರೆ ಕೋವಿಡ್ ಬಂದ ಕಾರಣ ಪೂಜಾ ಮನೆಯವರು ಮದುವೆ ಮುಂದೂಡುವುದಾಗಿ ಕೇಳಿಕೊಂಡಾಗ, ಇತ್ತ ಮಂಜುನಾಥ್ ಮನೆಯವರು ಬೇಡ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಿ ಎಂದ ಕಾರಣ ಕಲ್ಯಾಣ ಮಂಟಪ, ಮದುವೆ ವೆರ್ಚವನೆಲ್ಲಾ ವಾಪಸ್ ಪಡೆದು ಆ ಹಣಕ್ಕೆ ಚಿನ್ನಾಭರಣ ಮಾಡಿಸಿ ಮದುವೆ ಮಾಡಿಕೊಟ್ಟಿದ್ರು. ಮದುವೆಯ ನಂತರ ಗರ್ಭಿಣಿಯಾಗಿದ್ದ ಪೂಜಾ ಎರಡರಿಂದ ಮೂರು ತಿಂಗಳಿಗೆ ಗರ್ಭಪಾತವಾಯ್ತು ಅಲ್ಲದೆ ಎರಡನೇ ಮಗು ಸಹ ಹೃದಯದ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಇದನ್ನೇ ಕಾರಣವಾಗಿಸಿಕೊಂಡ ಮಂಜುನಾಥ ಹಾಗೂ ಆಕೆಯ ತಾಯಿ ಶ್ಯಾಮಲಾ ಆಕೆಗೆ ನಿರಂತರ ಕಿರುಕುಳ ಕೊಡೋಕೆ ಶುರು ಮಾಡಿದ್ರಂತೆ. ವರದಕ್ಷಿಣೆ ಕಿರುಕುಳ ಕೊಡೋದರ ಜತೆಗೆ ನೀನು ಅನಿಷ್ಟ ಎಂದು ಹೀಯಾಳಿಸುತ್ತಿದ್ರಂತೆ.

ಹೀಗೆ ಮನೆಯಲ್ಲಿ ನಡೆಯುವ ಬೆಳವಣಿಗೆಯಿಂದ ಬೇಸತ್ತು ಬೇರೊಂದು ಬಾಡಿಗೆ ಮನೆ ಮಾಡಿ ಹಾಲುಕ್ಕಿಸಿದವಳು ಮರುದಿನವೇ ಮನೆಯ ಫ್ಯಾನಿನ ಹುಕ್ಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತೆ ಪೂಜಾ ಪತಿ ಮಂಜುನಾಥ್ ಹಾಗೂ ಆತನ ತಾಯಿ ಶ್ಯಾಮಲಾಳನ್ನ ವಶಕ್ಕೆ ಪಡೆದು ತನಿಖೆ ನಡೆದುತ್ತಿದ್ದಾರೆ.

Edited By : Shivu K
PublicNext

PublicNext

06/06/2022 10:55 am

Cinque Terre

33.15 K

Cinque Terre

0

ಸಂಬಂಧಿತ ಸುದ್ದಿ