ಬೆಂಗಳೂರು: ಕುಡಿದ ಮತ್ತಿನಲ್ಲಿ ನೆರೆ ಮನೆಯವರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪುಲಕೇಶಿನಗರದ ಕೆಎಚ್‌ಬಿ ಕಾಲೋನಿ ನಿವಾಸಿ ಪ್ರಶಾಂತ್ ಕೊಲೆಯಾಗಿದ್ದು, ನೆರೆ ಮನೆ ನಿವಾಸಿ ಆರೋಪಿ ಅರ್ಜುನ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.
ಸಂಜೆ ಮದ್ಯಪಾನ ಮಾಡಿ ಪ್ರಶಾಂತ್ ಮೀನು ಮಾರಾಟ ಮಾಡುತ್ತಿದ್ದವನಿಗೆ ಸುಖಾ ಸುಮ್ಮನೆ ಬೆದರಿಸುತ್ತಿದ್ದ. ಅದೇ ಸಮಯದಲ್ಲಿ ಆರೋಪಿ ಅರ್ಜುನ್ ಮೀನು ಖರೀದಿಸಲು ಬಂದಿದ್ದ. ಈ ವೇಳೆ ಪ್ರಶಾಂತ್ ಗಲಾಟೆ ಮಾಡಬೇಕಾದ್ರೆ ಅರ್ಜುನ್, ಎಂಟ್ರಿಯಾಗಿ ‘ನಾನು ಮೀನು ತೆಗೆದುಕೊಂಡು ಹೋಗಲು ಬಂದಾಗ ಗಲಾಟೆ ಮಾಡ್ತಿಯಾ’ ಎಂದು ಜಗಳ ತೆಗೆದಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು, ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ರು. ಈ ವೇಳೆ ಕೋಪಗೊಂಡ ಪ್ರಶಾಂತ್ ಮನೆಯಲ್ಲಿದ್ದ ಚೂರಿಯಿಂದ ಪ್ರಶಾಂತ್ ಎದೆಯ ಭಾಗಕ್ಕೆ ಇರಿದಿದ್ದ. ಚೂರಿ ಇರಿತದಿಂದ ತೀವ್ರ ರಕ್ತಸ್ರಾವ ಉಂಟಾಗಿ ಪ್ರಶಾಂತ್ ಮೃತಪಟ್ಟಿದ್ದಾನೆ. ಪ್ರಶಾಂತ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪುಲಕೇಶಿನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
05/06/2022 11:00 pm