ಬೆಂಗಳೂರು: ಎಸಿಬಿ ಹೆಸ್ರಲ್ಲಿ ದಳ್ಳಾಳಿಗಳು ಸರ್ಕಾರಿ ಅಧಿಕಾರಿಗಳಿಗೆ ಹೆದರಿಸಿ ಹಣ ಪೀಕೋ ಖಯಾಲಿ ಮುಂದುವರೆದಿದೆ. ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ಎಸಿಬಿ ದಾಳಿ ಹೆಸ್ರಲ್ಲಿ ದಾಳಿ ಆಗುತ್ತೆ, ಅದನ್ನ ತಪ್ಪಿಸಲು ಗಿಪ್ಫ್ ರೂಪದಲ್ಲಿ ಹಣ ಪಡೆಯೋ ಹೊಂಚುಹಾಕಿದ್ದವರ ವಿರುದ್ಧ ಕೇಸ್ ದಾಖಲಾಗಿದೆ.
ಎಸಿಬಿ ಡಿವೈಎಸ್ಪಿ ಹೆಸರಿನಲ್ಲಿ ಕರೆ ಮಾಡಿ ನಾಳೆ ಎಸಿಬಿ ದಾಳಿ ಆಗುತ್ತೆ ಇದನ್ನು ತಪ್ಪಿಸಲು ಗಿಫ್ಟ್ ನೀಡುವಂತೆ ಬೇಡಿಕೆಯಿಟ್ಟ ನಕಲಿ ಎಸಿಬಿ ಅಧಿಕಾರಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಧನಂಜಯ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ನಕಲಿ ಅಧಿಕಾರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಧನಂಜಯ್ ಗೆ ಕರೆ ಮಾಡಿದ ನಕಲಿ ಎಸಿಬಿ ಡಿವೈಎಸ್ಪಿ ನಿಮ್ಮ ವಿರುದ್ಧ ಡಿಡಿಪಿಐ, ಬಿಇಓಗಳು ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಿಸಿ ಎಸಿಬಿಗೆ ದೂರು ನೀಡಿದ್ದಾರೆ.
ನಮ್ಮ ಅಧಿಕಾರಿಗಳು ನಿಮ್ಮ ಕಚೇರಿ ಹಾಗೂ ಮನೆ ಬಳಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ ಎಂದು ಕರೆ ಮಾಡಿದ್ರು. ಮತ್ತೊಮ್ಮೆಕರೆ ಮಾಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಜೊತೆ ಮಾತನಾಡಿದ್ದು ದಾಳಿ ನಡೆಯುವುದಿಲ್ಲ.
ನಿಮ್ಮ ಒಳ್ಳೆತನ ನೋಡಿ ನಿಮಗೆ ಸಹಾಯ ಮಾಡುತ್ತಿದ್ದೇನೆ. ನಮ್ಮ ಎಸಿಬಿ ತನಿಖಾಧಿಕಾರಿಗಳು ಶ್ರೀಲಂಕಾ ಪ್ರವಾಸ ಹೋಗುತ್ತಿದ್ದು ಗಿಫ್ಟ್ ಕೊಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದೇ ರೀತಿ ಇತರೆ ಅಧೀನ ಕಾರ್ಯದರ್ಶಿಗಳಾದ ಶರಣಪ್ಪ ಹಾಗೂ ಪದ್ಮಿನಿ ಎಂಬುವರಿಗೂ ಕರೆ ಮಾಡಿದ್ದಾನೆ.ಆರೋಪಿಯ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ..
Kshetra Samachara
26/05/2022 08:37 pm