ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸರ ಮುಂದೆ ಅನಂತರಾಜು ಪತ್ನಿ ಸುಮಾ ಇಂದು ವಿಚಾರಣೆಗೆ ಹಾಜರಾಗಿದ್ದರು. ಸುಮಾರು ನಾಲ್ಕು ಗಂಟೆ ಸುದೀರ್ಘವಾಗಿ ಸುಮಾ ಅವರ ಹೇಳಿಕೆಯನ್ನು ಬ್ಯಾಡರಹಳ್ಳಿ ಪೊಲೀಸ್ರು ದಾಖಲಿಸಿದ್ದಾರೆ. ಅನಂತರಾಜು ಸಾವಿಗೆ ಮುನ್ನ ಮನೆಯಲ್ಲಿ ರೇಖಾ ವಿಚಾರಕ್ಕೆ ಆದ ಗಲಾಟೆ ಸಾವಿನ ದಿನ ನಡೆದ ಒಂದಷ್ಟು ಬೆಳವಣಿಗೆಯನ್ನು ಪೊಲೀಸರ ಮುಂದೆ ಸುಮಾ ವಿವರಿಸಿದ್ದಾರೆ.
ಅನಂತರಾಜ್ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಬಳಿಕ ಪತ್ನಿ ಸುಮಾ, ತನ್ನ ಗಂಡ ಹನಿಟ್ರ್ಯಾಪ್ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣ ರೇಖಾಳನ್ನ ಬಂಧಿಸಬೇಕು ಎಂದು ದೂರು ನೀಡಿದ್ದರು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ರೇಖಾಳನ್ನು ಬಂಧಿಸುತ್ತಿದ್ದಂತೆ ರೇಖಾ ಹಾಗೂ ಸುಮಾ ಅವರ ನಡುವೆ ನಡೆದ ಪೋನ್ ಸಂಭಾಷಣೆ ವೈರಲ್ ಆಗಿತ್ತು. ಪ್ರಕರಣಕ್ಕೆ ತಿರುವು ಸಿಗುತ್ತಿದ್ದಂತೆ ಸುಮಾ ಮೇಲೆ ಪೊಲೀಸರು ಅನುಮಾನದ ಕಣ್ಣು ಇಟ್ಟಿದ್ದರು. ಸದ್ಯ ಸುಮಾ ಹೇಳಿಕೆ ದಾಖಲಿಸಿ ಅಗತ್ಯವಿದ್ದಾಗ ಪುನಃ ವಿಚಾರಣೆ ಕರೆದ್ರೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ.
PublicNext
24/05/2022 08:36 pm