ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಗೆ ಕಾಸಿಲ್ಲದೆ ಹಣಹೊಂದಿಸಲು ಬೈಕ್ ಕಳ್ಳತನಕ್ಕಿಳಿದ್ದ ಆರೋಪಿ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ.ರಾತ್ರಿ ವೇಳೆ ಟೈಟನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಬೆಳಗ್ಗೆ ಬೈಕ್ ಕಳ್ಳತನ ಕೆಲಸಕ್ಕೆ ಕೈ ಹಾಕ್ತಿದ್ದ. ಸದ್ಯ ಈ ಬೈಕ್ ಕಳ್ಳ ಲಕ್ಷ್ಮೀಪತಿಯನ್ನ ಭಾರತಿ ನಗರ ಪೊಲೀಸ್ರು ಬಂಧಿಸಿದ್ದಾರೆ.
ಐಟಿಐ ಓದಿಕೊಂಡಿದ್ದ ಲಕ್ಷ್ಮೀಪತಿ ಹೊಸೂರಿನ ಟೈಟನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಐಪಿಎಲ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದು ವಿಪರೀತ ಸಾಲಗಾರನಾಗಿದ್ದ ಲಕ್ಷ್ಮೀಪತಿ ಸಾಲ ತೀರಿಸಲು ಬೈಕ್ ಕಳ್ಳತನ ಹಾದಿ ಹಿಡಿದಿದ್ದ. ಆಂಧ್ರದ ಕುಪ್ಪಂ ಮೂಲದ ಲಕ್ಷ್ಮೀಪತಿ ಹೊಸ ಅಫೆಂಡರ್ ಆಗಿದ್ದು ಬೈಕ್ ಕದ್ದು ಪೊಲೀಸ್ರಿಗೆ ತಲೆ ನೋವಾಗಿದ್ದ.ಸದ್ಯ ಆರೋಪಿ ಬಂಧಿಸಿರುವ ಭಾರತಿ ನಗರ ಪೊಲೀಸರು.
ಬಂಧಿತನಿಂದ 4 ಲಕ್ಷ ಮೌಲ್ಯದ 10 ದ್ವಿಚಕ್ರವಾಹನ ಸೀಜ್ ಮಾಡಿದ್ದಾರೆ
Kshetra Samachara
24/05/2022 02:25 pm