ಬೆಂಗಳೂರು : ಆತ ದೂರದ ಓಮನ್ ದೇಶದಿಂದ ಓದಲು ಭಾರತದ ಬೆಂಗಳೂರಿಗೆ ಬಂದಿದ್ದ. ಯಲಹಂಕ ಸಮೀಪದ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿ ಕಟ್ಟಿಗೇನಹಳ್ಳಿಯ ಬೃಂದಾವನ ಕಾಲೇಜಿನಲ್ಲಿ BCA ಮೊದಲ ವರ್ಷ ಓದುತ್ತಿದ್ದ. 22 ವರ್ಷದ ಅಬ್ದುಲ್ ಅಜೀಜ್ ಎಂಬ ಯುವಕನಿಗೆ ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇದರಿಂದ ಫಸ್ಟ್ ಇಯರ್ ಫೇಲ್ ಆಗಿದ್ದ. ಇದರಿಂದ ಮನನೊಂದು ತನ್ನ ಹಾಸ್ಟಲ್ ಕೋಣೆಲಿ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಓಮನ್ ದೇಶದ ಅಬ್ದುಲ್ ಅಜೀಜ್ ಗೆ ಇಂಗ್ಲೀಷ್ ಭಾಷೆ ಅಷ್ಟಕ್ಕಷ್ಟೆ. ಆದ್ದರಿಂದ ಆತ ಭಾರತಕ್ಕೆ ಬಂದ ಮೇಲೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಗೆ ಹೋಗಿ ಸ್ವಲ್ಪ ಇಂಗ್ಲೀಷ್ ಇಂಪ್ರೂ ಸಹ ಆಗಿದ್ದ. ಚನ್ನಾಗಿ ಓದಿ ಫಾಸ್ ಆಗಿ ಸ್ವದೇಶಕ್ಕೆ ಬರಬೇಕು ಎಂದು ಪೋಷಕರು ಆಗ್ರಹಿಸಿದ್ದರು. ಬೃಂದಾವನ ಕಾಲೇಜಿನಲ್ಲೂ ಲವಲವಿಕೆಯಿಂದ ಇದ್ದ.
ಅಜೀಜ್ ಮೇ 21ರಂದು ಬೃಂದಾವನ ಕಾಲೇಜಿನ ತನ್ನ ಹಾಸ್ಟಲ್ ಗೆ ಹೋಗಿ ಲಾಕ್ ಮಾಡಿಕೊಂಡವನು ಬಾಗಿಲು ತೆಗೆದೇ ಇರಲಿಲ್ಲ. ಇದರಿಂದ ಗಾಬರಿಗೊಂಡ ಸಹಚರರು ಬಾಗಿಲು ಹೊಡೆದು ನೋಡಿದಾಗ ಆತ ನೇಣಿಗೆ ಶರಣಾಗಿದ್ದ. ಮೂರಕ್ಕು ಹೆಚ್ಚು ದಿನ ಆದ್ದರಿಂದ ಅಬ್ದುಲ್ ಮೃತದೇಹ ಊದಿಕೊಂಡು ಕೊಳೆತ ಸ್ಥಿತಿಲಿ ಪತ್ತೆಯಾಗಿದೆ. ಬಾಗಲೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
23/05/2022 11:04 pm