ಬೆಂಗಳೂರು: ಉಚಿತ ಗಿಫ್ಟ್, ಲೋನ್ ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆಫ್ರಿಕಾದ ಘಾನ ದೇಶದ ಪ್ರಜೆಯನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಘಾನ ದೇಶದ ಪ್ರಜೆ 26 ವರ್ಷದ ಸ್ಯಾಮ್ಯುಯಲ್ ಒಕೋನ್ ಬಂಧಿತ ಆರೋಪಿ. ಈತ ತ್ರಿಪುರ, ಅಸ್ಸಾಂ, ನಾಗಾಲ್ಯಾಂಡ್, ಸಿಕ್ಕಿಂ, ಮಿಜೋರಾಂ, ಅರುಣಾಚಲಪ್ರದೇಶ, ಮೇಘಾಲಯ ಮತ್ತು ಮಣಿಪುರ ಸೇರಿ ಈಶಾನ್ಯ ಭಾರತದ ರಾಜ್ಯಗಳ ಜನರಿಗೆ ಹಣ ಕೊಡುತ್ತಿದ್ದ. ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸುತ್ತಿದ್ದ. ಅವರ ದಾಖಲೆ ಕೊಡಿಸಿ ಅವರ ಹೆಸರಿನಲ್ಲೇ ಸಿಮ್ ಕಾರ್ಡ್ ಪಡಿಯುತ್ತಿದ್ದ. ನಂತರ ಈ ನಂಬರ್ಗಳಿಂದ ಕರೆ ಮಾಡಿ, ಜನರಿಗೆ ಲಾಟರಿ, ಕೆಲಸ, ಉಡುಗೊರೆ ಅಂತ ಆಸೆ ತೋರಿಸಿ, ಅವರಿಂದ ಹಣ ಪಡೆಯುತ್ತಿದ್ದ. ಈ ಹಣ ಮೋಜಿನ ಜೀವನ ನಡೆಸುತ್ತಿದ್ದ. ಕೆಲಸ ಮುಗಿದ ನಂತರ ನಂಬರ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿನ ಬಂಧಿಸಿದ್ದಾರೆ. 7 ಸಿಮ್ ಕಾರ್ಡ್, 6 ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ಸ್ ವಶಕ್ಕೆ ಪಡೆದಿದ್ದಾರೆ. ಇನ್ನು ಕರ್ನಾಟಕ ಸೇರಿ ಇತರೆ ರಾಜ್ಯದ ಜನರಿಗೆ ಆರೋಪಿ ವಂಚಿಸಿರು ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
SureshBabu Public Next ಯಲಹಂಕ
PublicNext
22/05/2022 10:36 pm