ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾರಿನ ಗ್ಲಾಸ್ ಒಡೆದು ಚಿನ್ನಾಭರಣ ದೋಚಿದ್ದ ದಂಪತಿ ಅಂದರ್

ಬೆಂಗಳೂರು: ಗಂಡ‌- ಹೆಂಡತಿ ಇಬ್ರೂ ಸಂಸಾರ ನೌಕೆ ಸಾಗಿಸೋಕೆ ಹಗಲು- ರಾತ್ರಿ ಕೆಲಸ‌ ಮಾಡಿ ಭವಿಷ್ಯ ಕಟ್ಟಿಕೊಳ್ತಾರೆ. ಆದ್ರೆ, ಇಲ್ಲಿ ಹಣಕ್ಕಾಗಿ ಈ ದಂಪತಿ ಚಿನ್ನಾಭರಣ ದೋಚಿ ಪೊಲೀಸ್ರ ಅತಿಥಿಯಾಗಿದ್ದಾರೆ. ಹೌದು, ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳ 28ರಂದು ನಿಂತಿದ್ದ ಕಾರಿನ ಗಾಜು ಒಡೆದು 1 ಕೆಜಿ 170 ಗ್ರಾಂ ಚಿನ್ನಾಭರಣ, 186 ಗ್ರಾಂ ವಜ್ರಾಭರಣ ದೋಚಿದ್ದಾರೆ.

ರಘುವಿನಹಳ್ಳಿಯಲ್ಲಿರುವ ಯೂನಿಯನ್ ಬ್ಯಾಂಕ್ ನಿಂದ ಚಿನ್ನಾಭರಣ ತಂದು ಕಾರಿನಲ್ಲಿಟ್ಟ ವ್ಯಕ್ತಿ, ನರ್ಸರಿಗೆ ಹೋಗಿ ವಾಪಸ್ ಬರುವಷ್ಟರಲ್ಲೇ ಕಳವು ನಡೆದೋಗಿತ್ತು. ಕೇವಲ 5 ನಿಮಿಷದಲ್ಲೇ ಖದೀಮರು ಚಿನ್ನದ ಬ್ಯಾಗ್ ಸಮೇತ ಎಸ್ಕೇಪ್ ಆಗಿದ್ರು. ಮೆಸೇಜ್ ಸಿಕ್ಕಿದ ತಕ್ಷಣ ಅಲರ್ಟ್ ಆದ ತಲಘಟ್ಟಪುರ ಪೊಲೀಸರು ಸುತ್ತಮುತ್ತಲಿನ ಸಿಸಿ ಟಿವಿ ಜಾಲಾಡಿದರು. ಆದರೆ, ಅಷ್ಟರಲ್ಲಾಗ್ಲೇ ʼಕಳ್ಳ ಜೋಡಿʼ ಪರಾರಿಯಾಗಿದ್ರು.

ಸತತ ಕಾರ್ಯಾಚರಣೆ ನಡೆಸಿದಾಗ ಚೆನ್ನೈನ ಶ್ರೀಪಾಂಡಿಯನ್ ನಗರದ ಅಲ್ಟೀಸ್ ಅಪಾರ್ಟ್ ಮೆಂಟ್‌ ನಲ್ಲಿ ಕಳ್ಳರಿಬ್ಬರೂ ಪೊಲೀಸ್ರಿಗೆ ಲಾಕ್ ಆಗಿದ್ದಾರೆ. ಒಜಿಕುಪ್ಪಂ ಗ್ಯಾಂಗ್ ಸದಸ್ಯರಾಗಿರುವ ರತ್ನಕುಮಾರ್ @ ರೆಡ್ಡಿ, ಪತ್ನಿ ತಾಸಿನ್ ಫಾತೀಮ ಬಂಧಿತರಾಗಿದ್ದು, 10 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ, 5 ಲಕ್ಷ ಮೌಲ್ಯದ 10 ಗ್ರಾಂ ವಜ್ರದ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಇಬ್ಬರು ಚೋರರು ಆಂಧ್ರದವರಾಗಿದ್ದು, 2015 ರಿಂದಲೂ ಒಜಿಕುಪ್ಪಂ ಗ್ಯಾಂಗ್ ಸದಸ್ಯರು. ಇವರ ಮೇಲೆ 26 ಪ್ರಕರಣಗಳು ದಾಖಲಾಗಿದೆ.‌

-ಶ್ರೀನಿವಾಸ್ ಚಂದ್ರ ʼಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ʼ

Edited By : Nagesh Gaonkar
PublicNext

PublicNext

21/05/2022 10:16 pm

Cinque Terre

47.59 K

Cinque Terre

0