ಬೆಂಗಳೂರು: ನಗರದ ದಂಡು ರೈಲ್ವೆ ಪೊಲೀಸರ ಕಾರ್ಯಚಾರಣೆ ನಡೆಸಿ, ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಲೇಡಿ ಗ್ಯಾಂಗ್ ನ ಬಂಧಿಸಿದ್ದಾರೆ. ರೂಪ , ಶರಣ್ಯಾ ಬಂಧಿತರಾಗಿದ್ದು, ಬಂಧಿತರಿಂದ 10 ಲಕ್ಷ ಮೌಲ್ಯದ 200 ಗ್ರಾ ಚಿನ್ನಭಾರಣಗಳು ಸೀಜ್ ಮಾಡಲಾಗಿದೆ.
ಆರೋಪಿಗಳು ರೈಲಿನಲ್ಲಿದ್ದ ಪ್ರಯಾಣಿಕರನ್ನ ಪರಿಚಯ ಮಾಡ್ಕೊಂಡು ಬೇರೆಡೆ ಗಮನ ಸೆಳೆದು ಪ್ರಯಾಣಿಕರ ಬ್ಯಾಗ್ ಗಳಲ್ಲಿದ್ದ ಚಿನ್ನಭಾರಣ ಕಳ್ಳತನ ಮಾಡ್ತಿದ್ರು. ಆಂಧ್ರಪ್ರದೇಶದ ಕುಪ್ಪಂ, ತಮಿಳುನಾಡಿನ ಜೋಲಾರಪೇಟೆ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿರೋ ತಲೆ ಮರೆಸಿಕೊಂಡಿದ್ರು. ಪ್ರತಿ ಬಾರೀಯೂ ಆರೋಪಿಗಳು ತಮ್ಮ ಹೆಸರು ಬದಲಿಸಿಕೊಂಡು ಪ್ರಯಾಣಿಕರನ್ನ ಪತಿಚಯ ಮಾಡಿಕೊಂಡು ತಮ್ಮ ಕೈಚಳಕ ತೋರಿಸ್ತಿದ್ರು. ಸದ್ಯ ಆರೋಪಿಗಳನ್ನ ಬಂಧಿಸಿ ರೈಲ್ವೇ ಪೊಲೀಸ್ರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
Kshetra Samachara
19/05/2022 09:35 pm