ಬೆಂಗಳೂರು: ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ಮಂಜುರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆಂಗೇರಿ ವಲಯದ ಅಬಕಾರಿ ಇನ್ಸ್‌ಪೆಕ್ಟರ್ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದು, ಸಿಎಲ್ 7 ಲೈಸೆನ್ಸ್ ಗೆ ಬಾರ್ ಮಾಲೀಕರೊಬ್ಬರು ಅರ್ಜಿ ಸಲ್ಲಿಸಿದ್ರು.
ಅಬಕಾರಿ ಆಯಕ್ತರು ಅರ್ಜಿ ಪರಿಶೀಲಿಸಿ ಅಬಕಾರಿ ಇನ್ಸ್‌ಪೆಕ್ಟರ್‌ಗೆ ಅರ್ಜಿ ವರ್ಗಾಯಿಸಿದ್ರು. ಆದ್ರೆ ದೇವರು ವರ ಕೊಟ್ರು ಪೂಜಾರಿ ವರಕೊಡಲ್ಲ ಅಂತಾರಲ್ಲ ಹಾಗೇ ಆಯುಕ್ತರು ಅರ್ಜಿ ಮೂ ಮಾಡಿದ್ರು ಇನ್ಸ್‌ಪೆಕ್ಟರ್ ಮಂಜುನಾಥ್ ಅನುಮತಿ ನೀಡಲು 15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ರು. ಇದಕ್ಕಾಗಿ 11 ಲಕ್ಷ ಹಣ ಅಡ್ವಾನ್ಸ್ ಪಡೆದು ಬಾಕಿ 4 ಲಕ್ಷಕ್ಕೆ ಇನ್ಸ್‌ಪೆಕ್ಟರ್ ದುಂಬಾಲು ಬಿದ್ದಿದ್ರು.ಇಂದು 4 ಲಕ್ಷ ಹಣ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
1 ಲಕ್ಷದ 2 ಸಾವಿರದ ನೂರು ರೂ ಹೆಚ್ಚುವರಿ ಹಣದ ಸಮೇತ ಇನ್ಸ್‌ಪೆಕ್ಟರ್ ಮಂಜುನಾಥ ಬಲೆಗೆ ಬಿದ್ದಿದ್ದು ಅಬಕಾರಿ ಇನ್ಸ್‌ಪೆಕ್ಟರ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Kshetra Samachara
19/05/2022 08:53 pm