ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಗಳೇ ಕಳ್ಳಿಯಾದ ಕಾರಣ 36 ಲಕ್ಷ ರೂ. ಚಿನ್ನಾಭರಣಕ್ಕಾಗಿ ಪೊಲೀಸ್ ಠಾಣೆ‌ ಮೆಟ್ಟಿಲೇರಿದ ತಾಯಿ

ಮನೆ ಕಾಯೋ ರಕ್ಷಕರೆ ಭಕ್ಷಕರಾದ ಕಥೆ ಇದು. ಮನೆ ಮಗಳೇ ಮನೆಗೆ ಕನ್ನ ಹಾಕಿ ಮಳ್ಳಿಯಂತೆ ಅಸಲಿಯನ್ನು ನಕಲಿ ಮಾಡಿದ್ದಾಳೆ. ಓದಿರೋದು ಫ್ಯಾಶನ್ ಡಿಸೈನಿಂಗ್. ಆದರೆ ತನ್ನ ಜೀವನವನ್ನೇ ಸರಿಯಾಗಿ ಡಿಸೈನ್ ಮಾಡಿಕೊಳ್ಳದೆ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾಳೆ.

ಈ ಫೋಟೊದಲ್ಲಿರುವ ಈಕೆಯ ಹೆಸರು ದೀಪ್ತಿ. ಇನ್ನು ಕಲರ್‌ಫುಲ್ ಆಗಿ ಕಾಣ್ತಿರುವ ಈತನ ಹೆಸರು ಮದನ್. ಈ ಇಬ್ಬರು ಆಸಾಮಿಗಳೇ ಈ ಕಥೆಯ ಪಾತ್ರಧಾರಿಗಳು. ಸ್ವಂತ ಮಗಳು ಮನೆಯಲ್ಲಿಟ್ಟಿದ್ದ 36 ಲಕ್ಷ ರೂ. ಬೆಲೆಯ ಚಿನ್ನಾಭರಣ ಕದ್ದು ನಕಲಿ ಉಮಾಗೋಲ್ಡ್ ಆಭರಣ ತಂದಿಟ್ಟಿದ್ದಳು. ನನಗೇನು ಗೊತ್ತಿಲ್ಲ ಎಂಬಂತೆ ಪ್ರಿಯಕರ ಜೆರಾಕ್ಸ್ ಅಂಗಡಿ ಮದನ್ ಜೊತೆ ಮೋಜು ಮಸ್ತಿ ಮಾಡಿದ್ದಳು. 36 ಲಕ್ಷ ರೂ. ಬೆಲೆಯ ಚಿನ್ನಾಭರಣನ ಹಂತ ಹಂತವಾಗಿ ಗಿರವಿ ಇಟ್ಟು ಹಣ ಪಡೆದು ಎಂಜಾಯ್ ಮಾಡಿದ್ದರು. ಅಮ್ಮ ಬಂದು ಆಭರಣಗಳನ್ನು ಚೆಕ್ ಮಾಡಿದಾಗ ನಕಲಿ ಚಿನ್ನ. ಕೂಡಲೇ ತಾಯಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿ ಮಗಳು ಮತ್ತು ಆಕೆಯ ಪ್ರಿಯಕರ ಮದನ್ ಮೇಲೆ ಸಂಶಯಪಟ್ಟಿದ್ದರು. ಯಾವಾಗ ಪೊಲೀಸರ ಎಂಟ್ರಿಯಾಯ್ತೊ ಇಬ್ಬರು ಚಿನ್ನಾಭರಣ ಕದ್ದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಅಮೃತಹಳ್ಳಿಯ ಮದನ್ ಮದುವೆಯಾಗಿ ಜೆರಾಕ್ಸ್ ಅಂಗಡಿ ನಡೆಸ್ತಿದ್ದಾನೆ. ದೀಪ್ತಿ ಗಂಡನನ್ನು ಬಿಟ್ಟು ತಾಯಿ ಮನೆಯಲ್ಲೇ ವಾಸವಿದ್ದಾಳೆ. ಗಂಡನನ್ನು ಬಿಟ್ಟು ಮದುವೆಯಾಗಿದ್ದ ಮದನ್ ಜೊತೆ ದೀಪ್ತಿ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದರು. ದೀಪ್ತಿ ತಂದೆ ತೀರಿಕೊಂಡ ನಂತರ ಅಮ್ಮ ಕೋಲಾರದ ಮುಳಬಾಗಿಲ ತೋಟದ ಕೆಲಸಕ್ಕೆ ಹೋಗಿ ಬರ್ತಿದ್ದರು. ಈ ವೇಳೆ ಮನೆಯಲ್ಲಿದ್ದ 800 ಗ್ರಾಂ ಚಿನ್ನಾಭರಣ ಕದ್ದು ಮೂರು ಕಾರು ಖರೀದಿಸಿದ್ದ ಮದನ್. ಹೀಗೆ ಅಮ್ಮನ ಒಡವೆ ಮಾರಿ ಮಗಳು ಮತ್ತು ಪ್ರಿಯಕರ ಮೋಜು ಮಸ್ತಿ ಮಾಡಿ ನಕಲಿ ಆಭರಣ ಇಟ್ಟು ನಾಟಕವಾಡಿದ್ದರು. ಇದೀಗ ತಾಯಿಯೇ ಮಗಳ ವಿರುದ್ಧ ತಿರುಗಿಬಿದ್ದ ಪರಿಣಾಮ ಮಗಳು ಮತ್ತು ಆಕೆಯ ಪ್ರಿಯಕರ ಜೈಲು ಸೇರುವಂತಾಗಿದೆ.

Edited By : Shivu K
PublicNext

PublicNext

17/05/2022 09:48 pm

Cinque Terre

50.98 K

Cinque Terre

0

ಸಂಬಂಧಿತ ಸುದ್ದಿ