ಬೆಂಗಳೂರು: ಇಸ್ಪೀಟ್ ಕ್ಲಬ್ ನಡೆಸುವ ಬಗ್ಗೆ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ,ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಮೇಲೆ ಎಫ್ ಐ ಆರ್ ದಾಖಲಾಗಿದ್ದು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು,ರಮೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಆರ್ಮ್ಸ್ ಆ್ಯಕ್ಟ್ 25,3 ಹಾಗೂ ಐಪಿಸಿ ಸೆಕ್ಷನ್ 384, 420 506b ಅಡಿ ಎಫ್ ಐ ಆರ್ ದಾಖಲಾಗಿದ್ದು, ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್ ಒಂದರಲ್ಲಿ ಇಸ್ಪೀಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ ಅಡಿಗ,ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ರೈಡ್ ಮಾಡಲ್ಲ,ಇದಕ್ಕಾಗಿ ನೀವು ಪ್ರತಿ ತಿಂಗಳು 50 ಸಾವಿರ ನೀಡಬೇಕು ಎಂದು ಹೇಳಿದ್ದ.
ಆದರೆ ಇದಕ್ಕೆ ರಮೇಶ್ ಹಾಗೂ ಶ್ರೀನಿವಾಸ್ ಎಂಬುವರು ಒಪ್ಪಿರಲಿಲ್ಲ ಹೀಗಾಗಿ ತನ್ನ ಸಹಕಾರ ಇಲ್ಲದೆ ಹೇಗೆ ಕ್ಲಬ್ ನಡೆಸುತ್ತೀರಿ ಎಂದು ಅವಾಜ್ ಹಾಕಿದ್ಧಲ್ಲದೆ ಪಿಸ್ತೂಲ್ ತೋರಿಸಿ ನಾನು ಅರ್ಧ ಗಂಟೆಯಲ್ಲಿ ನಿನ್ನ ಕ್ಲಬ್ ಕ್ಲೋಸ್ ಮಾಡಿಸ್ತಿನಿ ಎಂದು ಶ್ರೀನಿವಾಸ ಬಳಿ 50 ಸಾವಿರ ತೆಗೆದುಕೊಂಡು ಹೋಗಿದ್ದ ಎಂದು ದೂರು ದಾಖಲಾಗಿದೆ.
Kshetra Samachara
16/05/2022 12:15 pm