ದೊಡ್ಡಬಳ್ಳಾಪುರ: ಬೆಳ್ಳಂ ಬೆಳಗ್ಗೆ ತಾಲೂಕಿನ ವಡಗೆರೆ ಗ್ರಾಮದಲ್ಲಿ ಮಹಿಳೆಯೊಬ್ಬಳ ಮರ್ಡರ್ ಆಗಿದೆ. ಮೃತಳ ಪತಿನೇ ಪತ್ನಿಯ ಕತ್ತು ಕುಯ್ದು ಕೊಲೆಗೈದನೋ ಅನುಮಾನವೂ ಈಗ ವ್ಯಕ್ತವಾಗಿದೆ. ಕಾರಣ, ಗಂಡನ ಫೋನ್ ಸ್ವಿಚ್ ಆಫ್ ಆಗಿದೆ.
ಇಂದು ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಗ್ರಾಮದ ಭಾಗ್ಯಶ್ರೀ (35) ಎಂಬ ಮಹಿಳೆಯ ಕೊಲೆಯಾಗಿದೆ. ಘಟನೆ ನಂತರ ಗಂಡ ಚನ್ನಬಸವಯ್ಯನ ಪೋನ್ ಸ್ವಿಚ್ ಆಫ್ ಆಗಿರೋದು ಈಗ ಹಲವು ಅನುಮಾನಕ್ಕೆ ಕಾರಣವಾಗಿದೆ.
ಕೊಲೆಯಾದ ಭಾಗ್ಯಶ್ರೀ ಇದೇ ಗ್ರಾಮದ ರಿಯಾಜ್ (27) ವರ್ಷದ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು,
ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ಇತ್ತು. ಕೆಲವು ದಿನಗಳಿಂದ ರಿಯಾಜ್ ನನ್ನ ಅವೈಡ್ ಮಾಡಿದ್ಲು. ಇಂದು ಸಂಬಂಧಿಕರ ಗೃಹ ಪ್ರವೇಶ ಇದ್ದ ಹಿನ್ನೆಲೆಯಲ್ಲಿ ಗಂಡ ಚನ್ನಬಸಯ್ಯ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ, ಮನೆಯಲ್ಲಿ ಗಂಡನಿಲ್ಲದ ಸಮಯದಲ್ಲಿ ಬಂದ ರಿಯಾಜ್ ಭಾಗ್ಯಶ್ರೀಯನ್ನ ಕೊಲೆಗೈದು ಪರಾರಿಯಾಗಿರುವ ಸಂಶಯ ಕೂಡ ಇದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
15/05/2022 04:04 pm