ಬೆಂಗಳೂರು: ಜೈಲಿನಿಂದ ಬಂದು ತಿಂಗಳು ತುಂಬುವ ಹೊತ್ತಿಗಾಗಲೇ ಹಳೇ ಚಾಳಿಮುಂದುವರಿಸಿ ಡ್ರಗ್ ಪೆಡ್ಲರ್ ಮತ್ತೆ ಜೈಲು ಸೇರಿದ್ದಾನೆ. ಸಿಬಿಬಿ ಪೊಲೀಸ್ರ ಕಾರ್ಯಾಚರಣೆ ವೇಳೆ ಆಕೀಬ್ ಮತ್ತು ಪ್ರದೀಪ್ ಬಂಧಿಯಾಗಿದ್ದಾರೆ.
ಬಂಧಿತರಿಂದ 15 ಲಕ್ಷಮೌಲ್ಯದ 160 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಸೀಜ್ ಮಾಡಿದ್ದಾರೆ. ಸೋಲದೇವನಹಳ್ಳಿ ಠಾಣವ್ಯಾಪ್ತಿಯಲ್ಲಿ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಡ್ರಗ್ ಸಪ್ಲೈ ಮಾಡ್ತಿದ್ರು. ಕಳೆದ ಫೆಬ್ರುವರಿಯಲ್ಲಿ ಪ್ರದೀಪ್ ಡ್ರಗ್ ಕೇಸ್ ನಲ್ಲಿ ಜೈಲೂ ಸೇರಿ ಕೆಲದಿನಗಳಿಂದಷ್ಟೇ ರಿಲೀಸ್ ಆಗಿದ್ದ. ರಿಲೀಸ್ ಆಗಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದವನು ಮತ್ತೆ ಸಿಸಿಬಿಗೆ ಲಾಕ್ ಆಗಿದ್ದಾನೆ.ಇನ್ನೂ ಈ ಆರೋಪಿಗಳು ಡಾರ್ಕ್ ವೆಬ್ ಮೂಲಕ ನೈಜೀರಿಯಾದಿಂದ ಡ್ರಗ್ ಇಂಪೋರ್ಟ್ ಮಾಡಿಕೊಂಡು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ರು ಎಂದು ತಿಳಿದು ಬಂದಿದೆ.
Kshetra Samachara
12/05/2022 05:35 pm