ಯಶವಂತಪುರ: ಮಧ್ಯರಾತ್ರಿ ಕಳ್ಳನೊಬ್ಬ ಫೈವ್ ಸ್ಟಾರ್ ಚಿಕನ್ ಸ್ಟಾಲ್ಗೆ ಕನ್ನ ಹಾಕಲು ಪ್ರಯತ್ನಿಸಿದ ಘಟನೆ ತಿಗಳರಪಾಳ್ಯದಲ್ಲಿ ನಡೆದಿದೆ. ಭಾನುವಾರ ಮಧ್ಯರಾತ್ರಿ 12.30 ರ ಸಮಯದಲ್ಲಿ ಟಿಪ್ ಟಾಪ್ ಆಗಿ ಡ್ರೆಸ್ ಮಾಡ್ಕೊಂಡು ಬಂದ ಆಸಾಮಿ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿರುವ ಒಂದೂವರೆ ತಿಂಗಳ ಹಿಂದಷ್ಟೇ ಪ್ರಾರಂಭ ಆಗಿರೊ ಫೈವ್ ಸ್ಟಾರ್ ಚಿಕನ್ ಸ್ಟಾಲ್ ಗೆ ಕನ್ನ ಹಾಕಿದ್ದ.
ಹೀಗೆ ಫೈವ್ ಸ್ಟಾರ್ ಚಿಕನ್ ನ ಕಿಚನ್ ಮೇಲಿದ್ದ ಶೀಟ್ ಒಡೆದು ಬಂದ ಆಸಾಮಿಗೆ ಸಿಸಿಟಿವಿ ಇರೋದು ಕಂಡಿದೆ. ತಕ್ಷಣ ಮಾಸ್ಕ್ ನಿಂದ ಮುಖ ಮುಚ್ಕೊಂಡು ಕ್ಯಾಶ್ ಕೌಂಟರ್ ಹುಡುಕಾಡಿದ್ದ. ಆದ್ರೆ ಆತ ಅಂದುಕೊಂಡಷ್ಟು ಹಣ ಆ ಕ್ಯಾಶ್ ಕೌಂಟರ್ ನಲ್ಲಿ ಇರಲಿಲ್ಲ. ಇದ್ದ 500 ರೂಪಾಯಿನಷ್ಟು ಚಿಲ್ಲರೆ ಹಣ ಜೇಬಿಗಿಳಿಸಿಕೊಂಡಿದ್ದ. ಕೊನೆಗೆ ಬರೋದು ಬಂದಿದ್ದೀನಿ, ಚಿಕನ್ ಆದ್ರು ತಗೊಂಡು ಹೋಗೋಣ ಅಂತ ಹುಡುಕಾಡಿದ್ದಾನೆ. ಆದ್ರೆ ಆತನಿಗೆ ಅಲ್ಲಿಯೂ ಏನು ಸಿಗಲಿಲ್ಲ. ಕೊನೆಗೆ ಬಂದ ದಾರಿಯಲ್ಲೇ ವಾಪಸ್ ಹೊರ ನಡೆದಿದ್ದಾನೆ. ಇನ್ನೂ ಅಂಗಡಿ ಮಾಲೀಕ ಅಭಿಷೇಕ್ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
PublicNext
10/05/2022 02:51 pm