ವರದಿ: ಬಲರಾಮ್ ವಿ
ಬೆಂಗಳೂರು: ಕಾಲೇಜ್ ವೊಂದರಲ್ಲಿ ರ‍್ಯಾಗಿಂಗ್ ಬೇಸತ್ತು ಮನೆ ಬಿಟ್ಟು ತೆರಳಿದ ವಿದ್ಯಾರ್ಥಿ ಲಾರಿವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಕೋಟೆಯ ಸಮೃದ್ಧಿ ಕಾಲೇಜಿನ ವಿದ್ಯಾರ್ಥಿ ಸೋಮನಾಥ ರ‍್ಯಾಗಿಂಗ್‌ಗೆ ಬಲಿಯಾದ ವಿದ್ಯಾರ್ಥಿ. ಕಾಲೇಜ್ ವಿದ್ಯಾರ್ಥಿಗಳ ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದ ಸಂದೇಶಗಳನ್ನು ಶೇರ್ ಮಾಡಿ ರ‍್ಯಾಗಿಂಗ್ ಮಾಡಿದ್ದರು ಎನ್ನಲಾಗಿದೆ..
ಬಳಿಕ ಸೋಮನಾಥನಿಗೆ ಕಾಲೇಜಿಗೆ ಬಂದರೆ ನೋಡಿಕೊಳ್ಳವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.ಇದರಿಂದ ಮನನೊಂದ ಸೋಮನಾಥ ಮನೆ ಬಿಟ್ಟು ಹೋಗಿದ್ದಾನೆ.
ತದನಂತರ ಎರಡು ದಿನಗಳ ಹಿಂದೆ ಎಂ ಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Kshetra Samachara
09/05/2022 10:50 pm