ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೀರು ಕೇಳುವ ನೆಪದಲ್ಲಿ ಬಂದು ಮನೆಗೆ ಕನ್ನ!

ಬೆಂಗಳೂರು: ನೀರು ಕೇಳುವ ನೆಪದಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಹಾಡಹಗಲೇ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಬೆಂ.ಉತ್ತರ ತಾಲ್ಲೂಕು ಮಾಚೋಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಈ ಘಟನೆ ನೆಡೆದಿದೆ.

ಇನ್ನೂ ಮಾಚೋಹಳ್ಳಿಯ ರಾಮು ಎಂಬುವರಿಗೆ ಸೇರಿದ ಮನೆಯಲ್ಲಿ ಕಳಳತನ ನಡೆದಿದ್ದು, ರಾಮು ಅವರ ಮನೆ ಬಾಗಿಲಲ್ಲಿ ಕುಳಿತ್ತಿದ್ದ ಸಂಬಂಧಿ ಗಂಗಮ್ಮ ಎಂಬುವರ ಬಳಿ ನೀರು ಕೇಳುವ ನೆಪದಲ್ಲಿ ಬಂದಿದ್ದ ಇಬ್ಬರ ಪೈಕಿ ಓರ್ವ ಆಕೆ ಬಳಿ ಮಾತನಾಡಿಸುತ್ತಾ ಗಮನ ಬೇರೆಡೆ ಸೆಳೆದಿದ್ರೆ, ಮತ್ತೋರ್ವ ಬೀರುವಿನ ಲಾಕರ್ನಲ್ಲಿದ್ದ ಸುಮಾರು 1.30 ಲಕ್ಷ ಮೌಲ್ಯದ ಚಿನ್ನಾಭರಣ, 10 ಸಾವಿರ ನಗದು ದೋಚಿ ಅಲ್ಲಿಂದ ಕಳ್ಳರು ಎಸ್ಕೇಪ್ ಆಗಿದ್ದಾರೆ..

ಕೆಲ ಹೊತ್ತಿನ ಬಳಿಕ ಒಳಗೆ ಹೋಗಿ ನೋಡಿದ ಗಂಗಮ್ಮಳಿಗೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

06/05/2022 10:50 am

Cinque Terre

1.32 K

Cinque Terre

0

ಸಂಬಂಧಿತ ಸುದ್ದಿ