ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಪಡೆಕೊಳ್ಳುತ್ತಿದೆ. ಮೊದಲಿಗೆ ಕಲ್ಬುರ್ಗಿಯಲ್ಲಿ ಬಿಜೆಪಿ ಸದಸ್ಯೆ, ಆಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಂತರ ಪೊಲೀಸ್ ಕಾನ್‌ಸ್ಟೇಬಲ್‌ಗಳು ಅರೆಸ್ಟ್ ಆಗಿದ್ದರು. ಸದ್ಯ ಹಾಲಿ ಇಲಾಖೆಯ ಅಧಿಕಾರಿಗಳ ಬುಡಕ್ಕೂ ಈ ಪಿಎಸ್‌ಐ ಅಕ್ರಮದ ಹಾವು ಸುತ್ತಿಕೊಳ್ಳುವ ಲಕ್ಷಣ ಕಾಣ್ತಿದೆ.
ಇಷ್ಟು ದಿನ ಕೆಲ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಅರೆಸ್ಟಾಗಿ ಅವರ ವಿಚಾರಗಳೇ ಸೌಂಡ್ ಮಾಡ್ತಿದ್ವು. ಈಗ ಪಿಎಸ್ಐ ಅಕ್ರಮದಲ್ಲಿ ಹಾಲಿ ಪೊಲೀಸರ ಹೆಸರು ಕೇಳಿಬರ್ತಿದೆ. ಬೆಂಗಳೂರಿನಲ್ಲಿ ಅರೆಸ್ಟ್ ಆಗಿರೋ ಅಭ್ಯರ್ಥಿಯೊಬ್ಬ ಮಾಡಿರೋ ಮೆಸೇಜ್ ಎನ್ನಲಾದ ಫೋಟೋ ವೈರಲ್ ಆಗ್ತಿದ್ದು ಪೊಲೀಸ್ ಡಿಪಾರ್ಟ್ಮೆಂಟ್‌ನಲ್ಲಿ ವೈಬ್ರೇಷನ್ ಕ್ರಿಯೇಟ್ ಮಾಡಿದೆ.
ಹೈಗ್ರೌಂಡ್ಸ್ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದ 10ನೇ ಆರೋಪಿ ಮಮತೇಶ್ ಮಾಡಿದ್ದಾನೆ ಎನ್ನಲಾದ ಮೆಸೇಜ್ ಇದು. ಇದೇ ಮೆಸೇಜ್ ಈಗ ಡಿಪಾರ್ಟ್ಮೆಂಟ್‌ನ ಕೆಲ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿದೆ. ಪಿಎಸ್ಐ ಹುದ್ದೆಗಾಗಿ ಇನ್‌ಸ್ಪೆಕ್ಟರ್‌ವೊಬ್ಬರಿಗೆ 60 ಲಕ್ಷ ರೂ. ಕೊಟ್ಟಿರೋದಾಗಿ ಮೆಸೇಜ್ ಮಾಡಿದ್ದಾನೆ. ಅಲ್ದೆ ಅದರಲ್ಲಿ ಎಸಿಪಿಯೊಬ್ಬರ ಹೆಸರು ಸೇರಿ ಒಟ್ಟು 12 ಜನರ ಹೆಸರು ಉಲ್ಲೇಖ ಮಾಡಿ ಯಾರ್ಯಾರಿಗೆ ಎಷ್ಟು ಅಂತಲೂ ಡಿಟೇಲ್ಸ್ ಹಾಕಿದ್ದು ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ.
ಇನ್‌ಸ್ಪೆಕ್ಟರ್ ಶ್ರೀನಿವಾಸ್ ಸರ್ ಕೆಲಸಕ್ಕೆ ಅಂತಾ ಮೋಹನ್ ಅವರಿಗೆ ಪ್ರಕಾಶ್ ಮುಂದೆ 55 ಲಕ್ಷ ರೂ. ಪಡೆದುಕೊಂಡಿದ್ದು, ಅವರ ಸ್ವಂತಕ್ಕೆ 5 ಲಕ್ಷ ರೂ. ಕೂಡ ತೆಗೆದುಕೊಂಡು ಒಟ್ಟು 60 ಲಕ್ಷ ರೂ. ತೆಗೆದುಕೊಂಡಿದ್ದಾರೆ ಅಂತ ಆರೋಪಿ ಮಮತೇಶ್ ವ್ಯಾಟ್ಸಪ್ ನಲ್ಲಿ ಮೆಸೇಜ್ ವೊಂದನ್ನ ಕಳಸಿದ್ದಾನೆ. ಅಲ್ಲದೆ ಅದರಲ್ಲಿ ಎಸಿಪಿ ಸಕ್ರೀ 22 ಲಕ್ಷ 50 ಸಾವಿರ ರೂ. ಕೊಡಬೇಕು ಅಂತ ಹೇಳಿದ್ದಲ್ಲದೇ ಇನ್ನೂ ಡೀಟೇಲ್ ಆಗಿ ಹಲವರ ಹೆಸರು ಮತ್ತು ಅವರ ಮುಂದೆ ಅಮೌಂಟ್ ನ ಡೀಟೇಲ್ಸ್ ಕೂಡ ಟೈಪ್ ಮಾಡಿದ್ದಾನೆ.. ಮಮತೇಶ್ ನ ಆ ಮೆಸೇಜ್ ಫೋಟೋ ಸಖತ್ ವೈರಲ್ ಆಗ್ತಿದೆ.
ಯಾರ್ ಯಾರಿಗೆ ಮಮತೇಶ್ ಕೊಟ್ಟಿದ್ದೇನು .? ಕಳುಹಿಸಿರುವ ಮೆಸೇಜ್ ಡಿಟೇಲ್ ನೋಡೋದಾದ್ರೆ.
ಎಸಿಪಿ ಸಕ್ರಿ - 22.5 ಲಕ್ಷ
ಮೋಹನ್ 55 ಲಕ್ಷ
ಪ್ರಕಾಶ್ - 5 ಲಕ್ಷ
ನಾಗೇಂದ್ರ - 6 ಲಕ್ಷ
ಗಂಗಾಧರ್ - 3 ಲಕ್ಷ
ಅಂಬರೀಶ್ 2 ಲಕ್ಷ
ಸೀನು ರೆಡ್ಡಿ 13 ಲಕ್ಷ
ಮಿಥುನ್ ರೆಡ್ಡಿ 7.5 ಲಕ್ಷ
ಸರವಣ 3 ಲಕ್ಷ
ಸರ್ಫೂದ್ದಿನ್ ಗೆ 16 ಲಕ್ಷ
ಒಟ್ಟು 1.33 ಕೋಟಿ
ಸದ್ಯ ಪ್ರಕರಣದ ತನಿಖೆ ನಡೆಸ್ತಿರೋ ಸಿಐಡಿ ಅಧಿಕಾರಿಗಳ ಮುಂದೆ ಹಲವು ಅನುಮಾನಗಳು ಮೂಡಿವೆ. ಈ ಮೆಸೇಜ್ ಸ್ಕ್ರೀನ್ ಶಾರ್ಟ್ ಮತ್ತಷ್ಟು ಪ್ರಶ್ನೆಗಳನ್ನ ಕಾಡಿಸ್ತಿದೆ. ಮಮತೇಶ್ ಮೆಸೇಜ್ ಮಾಡಿರೋ ಆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಯಾರು. ಆತನಿಗೆ ಯಾಕೆ ಹಣ ಕೊಟ್ಟಿದ್ದು, ಶ್ರೀನಿವಾಸ್ ಸಿಕ್ರೆ ಈ ಕೇಸ್‌ನಲ್ಲಿ ಮತ್ತಷ್ಟು ತಿರುವುಗಳು ಪಡೆದುಕೊಳ್ಳುತ್ವಾ.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಐಡಿ ಇನ್ವೆಷ್ಟಿಗೇಷನ್ ನಂತರದಲ್ಲೇ ಗೊತ್ತಾಗಲಿದೆ.
-ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
04/05/2022 09:55 am