ವರದಿ- ಬಲರಾಮ್ .ವಿ
ಬೆಂಗಳೂರು: ಕಂಪನಿಯಲ್ಲಿ ಕೆಲಸ ಮಾಡಿಕೊಂಡೆ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮಾರತ್‌ಹಳ್ಳಿ ಠಾಣೆ ಪೊಲೀಸರು ಆತನಿಂದ 67 ಲ್ಯಾಪ್‌ಟಾಪ್‌ಗಳು ಸೇರಿದಂತೆ ಒಟ್ಟು 60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ತೂಬರಹಳ್ಳಿಯ ಶ್ರೀವಾದಿ ಲೇಔಟ್‌ನ ನಿವಾಸಿ ಚಿನ್ನ ಬಥಿನಿ ಜಾನ್‌ಪೌಲ್ (34) ಬಂಧಿತ ಆರೋಪಿ ಆಗಿದ್ದು, ಮೂಲತಃ ತೆಲಂಗಾಣದವನಾಗಿದ್ದಾನೆ.
ಈತ ಕಾಡುಬೀಸನ ಹಳ್ಳಿಯ ಅರೆಕಲ್ ಇಂಡಿಯಾ ಪ್ರೈ. ಕಂಪನಿಯಲ್ಲಿ ಸೆಕ್ಯೂರಿಟಿ ಸಪೋರ್ಟ್ ಸ್ಪೆಷಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಕಂಪನಿಯ ಸ್ಟೋರ್ ರೂಮ್ ಹಾಗೂ ಐಟಿ ರೂಮ್‌ಗಳಲ್ಲಿ ಇಟ್ಟಿದ್ದ ಸುಮಾರು 100 ಕ್ಕೂ ಹೆಚ್ಚು ಶ್ಯಾಪ್‌ಟಾಪ್‌ಗಳು ಕಳುವಾಗಿರುವ ಬಗ್ಗೆ ಮಾರತ್ ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ವಿಚಾರಣೆ ನಡೆಸಿದಾಗ ಆತ ನೀಡಿದ ಹೇಳಿಕೆ ಮೇರೆಗೆ 18 ಆ್ಯಪಲ್ ಮ್ಯಾಕ್‌ಬುಕ್, 43 ಲೆನೋವಾ ಕಂಪನಿಯ ಲ್ಯಾಪ್‌ಟಾಪ್ ಮತ್ತು 6 ಡೆಲ್ ಲ್ಯಾಪ್‌ಟಾಪ್ ಸೇರಿದಂತೆ ಒಟ್ಟು 67 ಲ್ಯಾಪ್‌ಟಾಪ್‌ಗಳು ಮಾರಾಟ ಮಾಡಿ ಬಂದ ಹಣದಲ್ಲಿ ಖರೀದಿಸಿದ್ದ 18 ಗ್ರಾಂ ತೂಕದ ಚಿನ್ನದ ಸರ, 11 ಗ್ರಾಂ ತೂಕದ ಎರಡು ಉಂಗುರ, ಮತ್ತು ಒಂದು ಕಾರ್ ವಶ ಪಡಿಸಿಕೊಂಡಿದ್ದಾರೆ.
Kshetra Samachara
30/04/2022 09:27 pm