ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಯುವತಿಯ ಹೇಳಿಕೆಯನ್ನ ಪೊಲೀಸ್ರು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದಾರೆ. ಯುವತಿಯಿಂದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ತಹಶೀಲ್ದಾರ್ ಮುಂದೆ ಈ ಹೇಳಿಕೆ ದಾಖಲು ಮಾಡಲಾಗುತ್ತೆ.
ಆ್ಯಸಿಡ್ ದಾಳಿಗೊಳಗಾದ ಯುವತಿ ಚೇತರಿಸಿಕೊಂಡು ಮೊದಲಿನಂತಾಗಲಿ ಅನ್ನೊದು ಎಲ್ಲರ ಪ್ರಾರ್ಥನೆಯಾಗಿದ್ದು. ಈ ನಡುವೆ ಕಾನೂನಿನ ಕುಣಿಕೆ ಬಿಗಿ ಮಾಡಲು ಪೊಲೀಸ್ರಿಂದ ಹೇಳಿಕೆ ದಾಖಲು ಮಾಡಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ನಡೆವ ಪ್ರಕ್ರಿಯೆ ಇದಾಗಿದ್ದು, ನಿನ್ನೆಯೇ ಸೆಂಟ್ ಜಾನ್ ಆಸ್ಪತ್ರೆ ಬಳಿ ತೆರಳಿ ಹೇಳಿಕೆ ದಾಖಲಿಸಿಲಾಗಿದೆ.
ಯುವತಿಯ ಈ ಹೇಳಿಕೆಯನ್ನ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ 32(1)ಅಡಿ ದಾಖಲಿಸಲಾಗುತ್ತೆ.ವಿಧಿ ಏನಾದ್ರು ಆಟವಾಡಿದ್ರೆ ಅಂಥ ಸಂದರ್ಭದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಲು ಈ ಹೇಳಿಕೆ ಪ್ರಮುಖ ಅಸ್ತ್ರವಾಗಲಿದೆ. ಯುವತಿ ಗುಣಮುಖವಾಗಿ ಮನೆಗೆ ವಾಪಸ್ಸಾಗಲಿ ಅನ್ನೋದು ಪಬ್ಲಿಕ್ ನೆಕ್ಸ್ಟ್ಆಶಯವಾಗಿದೆ.
ಇನ್ನೂಂದು ಕಡೆ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸ್ತಿದ್ದು ಬಲವಾದ ಸಾಕ್ಷ್ಯಗಳೂ ಈಗ ಸಂಗ್ರಹವಾಗ್ತಿದೆ.
ಯುವತಿ ಮೇಲೆ ಆ್ಯಸಿಡ್ ಪ್ರಕರಣದ ತನಿಖೆ ವೇಳೆ ಆ್ಯಸಿಡ್ ಬಗ್ಗೆ ಪೊಲೀಸ್ರು ಮಾಹಿತಿ ಕಲೆ ಹಾಕಿದ್ದು,
ಗಾರ್ಮೆಂಟ್ಸ್ ನಲ್ಲಿ ಬಟ್ಟೆ ವಾಶಿಂಗ್‌ಗೆ ಬಳಸುವ ಆ್ಯಸಿಡ್ ಬಳಸಿರುವ ಶಂಕೆ ವ್ಯಕ್ತವಾಗಿದೆ. ಅರ್ಧ ಲೀಟರ್ ಆ್ಯಸಿಡ್ ಗೆ ಕೆಮಿಕಲ್ ಮಿಕ್ಸ್ ಮಾಡಿ 10 ಲೀಟರ್ ಗೂ ಹೆಚ್ಚು ನೀರನ್ನ ಬಳಸುತ್ತಾರೆ.ಬಟ್ಟೆ ಮೇಲಿರುವ ಕೊಳೆ ಹಾಗೂ ಮಾರ್ಕ್‌ಗಳು ಹೋಗಲು ಬಳಸುವ ಆ್ಯಸಿಡ್ ಇದಾಗಿದೆ. ಇಂತಹ ಆ್ಯಸಿಡ್ ನ ಡೈರೆಕ್ಟ್ ಆಗಿ ಬಳಸಿರುವ ಶಂಕೆ ವ್ಯಕ್ತವಾಗಿದೆ.
Kshetra Samachara
30/04/2022 03:10 pm