ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರ ಎದುರಿಸುತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ವಿಚಾರಣೆಗೆ ಹಾಜರಾಗುವಂತೆ ಮನೆಯ ಗೋಡೆಗೆ ನೋಟೀಸ್ ಅಂಟಿಸಲಾಗಿದೆ ಎಂದು ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇಲಾಖೆಯ ಡಿಜಿಪಿ ಡಾ.ರವೀಂದ್ರನಾಥ್ ತಿಳಿಸಿದ್ದಾರೆ.
ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಐಪಿಎಸ್ ಅಧಿಕಾರಿ ಹುದ್ದೆಗೆ ಏರಿದ್ದಾರೆ ಎಂದು ದಶಕಗಳ ಹಿಂದೆಯೇ ಆರೋಪ ಕೇಳಿಬಂದಿತ್ತು. ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟೀಸ್‌ಗೆ ಬಂದು ವಿಚಾರಣೆ ಹಾಜರಾಗಿಲ್ಲ. ಹೀಗಾಗಿ ಅವರ ಮನೆಗೆ ಇಂದು ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ನೋಟೀಸ್ ಅಂಟಿಸಿದ್ದಾರೆ.
ಕೆಂಪಯ್ಯ ಅವರಿಗೆ ಸಂಬಂಧಿಸಿದ ಕಡತ ಸಹ ನಮ್ಮ ಕಚೇರಿಯಲ್ಲಿ ಇರಲಿಲ್ಲ. ಅದು ಬೇರೆ ಕಡೆ ಇಡಲಾಗಿತ್ತು. ಅದನ್ನು ಈಗ ತನಿಖೆಗೆ ಒಳಪಡಿಸಲಾಗಿದೆ. ಸುಳ್ಳು ಜಾತಿ ಪ್ರಮಾಣ ಕೊಟ್ಟಿರುವುದು ಸಾಬೀತಾದರೆ ಕೆಲಸಕ್ಕೆ ಸೇರಿ ನಂತರ ನಿವೃತ್ತರಾಗಿದ್ರು ಸಹ ಅವರ ಸಂಪೂರ್ಣ ಪಿಂಚಣಿ ಹಾಗೂ ಸಂಬಳ ಸರ್ಕಾರಕ್ಕೆ ವಾಪಸ್ಸು ಪಡೆಯಬಹುದಾಗಿದೆ ಎಂದರು.
ಜಾತಿ ವಿಚಾರಣೆ ಅನ್ನೊದು ಸಂವಿಧಾನದ ಅಡಿಯಲ್ಲಿ ನೀಡಿದ ಹಕ್ಕಿನ ಅಡಿಯಲ್ಲಿ ಸಿಗುವ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಅದರಂತೆ ಜಾತಿಯ ಸರ್ಟಿಫಿಕೇಟ್ ಗಳು ನೀಡಲಾಗುತ್ತೆ. ಅದರಲ್ಲಿ ಜಾತಿ ವಿಚಾರಣೆ ಸುಳ್ಳು ಎಂದು ಸಂಶಯ ಬಂದಾಗ ತಮ್ಮ ಇಲಾಖೆಗೆ ತನಿಖೆಗೆ ನೀಡಲಾಗುತ್ತದೆ. ತಾಲೂಕು ಹಂತದಲ್ಲಿ ತಹಶಿಲ್ದಾರ್ ಅವ್ರು ಜಾತಿ ಪ್ರಮಾಣ ಪತ್ರ ನೀಡುತ್ತಾರೆ. ಇತ್ತೀಚಿನ ದಿನದಲ್ಲಿ ಜಾತಿ ಪ್ರಮಾಣದ ಪತ್ರಗಳ ವಿಚಾರದಲ್ಲಿ ದೂರುಗಳು ಕೇಳಿ ಬರುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು. ಸಂವಿಧಾನಕ್ಕೆ ಮಾಡುವ ವಂಚನೆ ಎಂದು ಹೇಳಿದೆ. ಈವರೆಗೂ ರಾಜ್ಯದಲ್ಲಿ 1097 ಜನರ ವಿರುದ್ದ ಸುಳ್ಳು ಜಾತಿ ಪ್ರಮಾಣ ಪ್ರತ್ರಗಳನ್ನು ಪಡೆದವರ ವಿರುದ್ದ ಕೇಸ್ ದಾಖಲು ಮಾಡಲಾಗಿದ್ದು ಇದುವರೆಗೆ ಕರ್ನಾಟಕದಲ್ಲಿ 89 ಜನರನ್ನು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಕ್ಕಾಗಿ ಸರ್ಕಾರದ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Kshetra Samachara
26/04/2022 09:52 pm