ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ಮೇಲೆ ಮತ್ತೊಂದು ದೂರು ದಾಖಲಾಗಿದೆ. ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ಪತ್ನಿ ಎನ್ನಲಾಗುತ್ತಿರುವ ರೋಜಾ ಎಂಬಾಕೆ ನಗರ ಪೊಲೀಸ್ ಆಯುಕ್ತರು ಹಾಗೂ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ರಾಘವೇಂದ್ರ ಚನ್ನಣ್ಣವರ್ ವಿವಾಹದ ನಂತರ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆಲ್ಲ ರವಿ ಚೆನ್ನಣ್ಣವರ್ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರವಿ ಚೆನ್ನಣ್ಣವರ್ ಶಿವಮೊಗ್ಗ ಜಿಲ್ಲೆಯ ಎಸ್‌ಪಿಯಾಗಿದ್ದ ವೇಳೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ಮದುವೆಯಾದ ಒಂದೇ ಒಂದು ವರ್ಷದಲ್ಲಿ ರಾಘವೇಂದ್ರ ಹೆಂಡತಿಯನ್ನು ಬಿಟ್ಟು ರುಕ್ಮಿಣಿ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾರೆ ಎಂದು ರೋಜಾ ಆರೋಪಿಸಿದ್ದಾರೆ. ಈ ಬಗ್ಗೆ ರವಿ ಚೆನ್ನಣ್ಣನವರ್ ಗಮನಕ್ಕೆ ತಂದಾಗ ಪ್ರಾರಂಭದಲ್ಲಿ ಸಮಯ ಹೀಗೆಲ್ಲ ಮಾಡ್ತಿದೆ. ನೀನು ನಿನ್ನ ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಅಂತ ಹೇಳಿದ್ದರಂತೆ. ಆದರೆ ಈಗ ನಾನು ಬೇಕಾದ್ರೆ ನೀನು ರುಕ್ಮಿಣಿಯೊಂದಿಗೆ ಹೊಂದಿಕೊಂಡು ಇರಬೇಕೆಂದು ಹೇಳುತ್ತಿದ್ದಾರೆ ಅಂತ ಗಂಭೀರ ಆರೋಪ ಮಾಡುತ್ತಿದ್ದಾರೆ.
ಅಲ್ಲದೇ ರಾಘವೇಂದ್ರ ಚನ್ನಣ್ಣವರ್ ಸಹೋದರ ರವಿ ಚೆನ್ನಣ್ಣವರ್ ಅಣ್ಣನ ಹೆಸರು ಬಳಸಿ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಹಾಗೂ ಸಹೋದರರಿಂದ ತನಗೆ ಜೀವ ಬೆದರಿಕೆ ಇದೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
PublicNext
25/04/2022 11:09 pm