ದೇವನಹಳ್ಳಿ: ಪಾರ್ಕ್ ನಲ್ಲಿ, ಕಾಲೇಜ್ ಕ್ಯಾಂಪಸ್ ನಲ್ಲಿ, ಬಸ್ಸಿನಲ್ಲಿ ಮಹಿಳೆಯರಿಗೆ ಕಿರುಕುಳ ಕೊಟ್ಟು ಜೈಲು ಸೇರಿರೋ ಉದಾಹರಣೆ ಇದೆ. ಆದರೆ, ಇಲ್ಲೊಬ್ಬ ಚೆನ್ನೈ ಆಸಾಮಿ ಬೆಂಗಳೂರಿನ ಮಹಿಳೆಗೆ ಫ್ಲೈಟ್ ನಲ್ಲೇ ಲೈಂಗಿಕ ಕಿರುಕುಳ ಕೊಟ್ಟು ಜೈಲು ಸೇರಿರುವ ಪ್ರಕರಣ
ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ.
ಆ ಮಹಿಳೆ ಮಾರ್ಕೆಟಿಂಗ್ ಕೆಲಸಕ್ಕೆಂದು ಚೆನ್ನೈಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಏ.18ರ ರಾತ್ರಿ 10ರ ಸುಮಾರಿಗೆ ಇಂಡಿಗೋ 6e6225 ವಿಮಾನದ ಹಿಂಬದಿ ಸೀಟ್ ನಂ-20aರಲ್ಲಿ ಕುಳಿತಿದ್ದ ಚೆನ್ನೈ ಮೂಲದ ಕೃಷ್ಣನ್ ಪಿ. ಎಂಬಾತ ಮುಂದಿನ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಮಹಿಳೆ ಕೂಡಲೇ ಎಚ್ಚೆತ್ತು, ಎಚ್ಚರಿಕೆ ನೀಡಿದ್ದರು.
ರಾತ್ರಿ 10ರ ನಂತರ ಕೃಷ್ಣನ್ ವಿಮಾನದಲ್ಲಿ ಇದೇ ರೀತಿ ಮೂರ್ನಾಲ್ಕು ಬಾರಿ ಮಹಿಳೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಮಹಿಳೆ ಹಿಂಬದಿ ಸೀಟಿನ ಕೃಷ್ಣನ್ ನಿಂದ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ವಿಮಾನದ ಕ್ಯಾಬಿನ್ ಕ್ರೂಗೆ ತಿಳಿಸಿದ್ದರು. ಕೃಷ್ಣನ್ ಜೊತೆ ಕೂತಿದ್ದ ದಂಪತಿ ಸಹ ಈತನ ಕುಕೃತ್ಯದ ಬಗ್ಗೆ ಸಿಬ್ಬಂದಿಗೆ ಹೇಳಿದ್ದರು.
ವಿಮಾನದಿಂದ ಇಳಿದ ಕೂಡಲೇ ಕೆಂಪೇಗೌಡ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದ ಪರಿಣಾಮ ಕೃಷ್ಣನ್ ನನ್ನು ಪೊಲೀಸರು ಬಂಧಿಸಿದ್ದರು. ಬೆಂಗಳೂರಿನಲ್ಲಿ ಖಾಸಗಿ ಕೆಲಸಕ್ಕೆ ಅಂತ ಬಂದಿದ್ದ ಕೃಷ್ಣನ್, ಇದೀಗ ಜೈಲು ಪಾಲಾಗಿದ್ದಾನೆ.
- ಸುರೇಶ್ ಬಾಬು Public Next ದೇವನಹಳ್ಳಿ
PublicNext
24/04/2022 01:43 pm