ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುರಾಯಿಸಿದ್ದಕ್ಕೆ ಯುವಕನ ಕೊಲೆ: ಕೆಂಗೇರಿ ಕರಗ ಉತ್ಸವದಲ್ಲಿ ಘಟನೆ

ಬೆಂಗಳೂರು: ಜಾತ್ರೆ ಕರಗ ಅಂದ ಮೇಲೆ ಜನರ ನಡುವೆ ನೂಕುನುಗ್ಗಲು ಇದ್ದೇ ಇರುತ್ತೆ. ಆದ್ರೆ ಈ ವೇಳೆ ಬೈಕ್ ಟಚ್ ಆಗಿ ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಸ್ನೇಹಿತರ ಜೊತೆ ಕೆಂಗೇರಿ ಕರಗ ನೋಡಲು ಬಂದಿದ್ದ ಭರತ್ ಬೈಕ್ ಟಚ್ ಆಯ್ತು ಅಂತ ಯುವಕರ ಗುಂಪೊಂದು ಕಿರಿಕ್ ಮಾಡಿದೆ. ಈ ವೇಳೆ ಭರತ್ ಹಾಗೂ ಇತರರೊಂದಿಗೆ 'ಗುರಾಯಿಸ್ತಿಯಾ?' ಅಂತ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ‌. ಈ ವೇಳೆ 10 ಜನ ಹುಡುಗ್ರನ್ನ ಕರೆಸಿದ್ದ ಪುಂಡರ ಗುಂಪು ಯುವಕನಿಗೆ ಚಾಕುವಿನಿಂದ ಇರಿದು ಭರತ್ ಎಂಬಾತನನ್ನು ಅತ್ಯಂತ ಅಮಾನುಷವಾಗಿ ಕೊಲೆ ಮಾಡಿದ್ದಾರೆ.

ಕೆಂಗೇರಿ ರೈಲ್ವೇ ಟ್ರ್ಯಾಕ್ ಬಳಿ ಘಟನೆ ನಡೆದಿದ್ದು ರೈಲ್ವೆ ಪೊಲೀಸರು ಪ್ರಕರಣ ದಾಖಾಲಿಸಿಕೊಂಡಿದ್ದಾರೆ. ಇನ್ನು ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ರೈಲ್ವೆ ಸಿಬ್ಬಂದಿ ಯುಡಿಆರ್ ಪ್ರಕರಣವೊಂದರ ಪರಿಶೀಲನೆ ನಡೆಸೋವಾಗ ಗುಂಪಾಗಿ ಗ್ಯಾಂಗ್‌ವೊಂದು ಶವವನ್ನು ಎಳೆದುಕೊಂಡು ಹೋಗ್ತಿರೋದು ಕಂಡು ಬಂದಿದೆ. ಈ ವೇಳೆ ರೈಲ್ವೆ ಸಿಬ್ಬಂದಿಯನ್ನ ನೋಡ್ತಿದ್ದಂತೆ ಆರೋಪಿಗಳು ಮೃತದೇಹ ಬಿಟ್ಟು ಎಸ್ಕೇಪ್ ಆಗಿದ್ದಾರೆ. ರೈಲ್ವೆ ಎಸ್.ಪಿ ಸಿರಿಗೌರಿ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

24/04/2022 12:15 pm

Cinque Terre

33.75 K

Cinque Terre

0