ನೆಲಮಂಗಲ: ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸ್ರು ಯಶಸ್ವಿಯಾಗಿದ್ದಾರೆ.
ಬೆಂ.ಉತ್ತರ ತಾಲೂಕು ಬೈಯಂಡಹಳ್ಳಿ ಬಳಿ ಐವರು ಯುವಕರ ಗುಂಪೊಂದು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚಾಕುತ್ತಿದ್ದ ಖಚಿತ ಮಾಹಿತಿ ತಿಳಿದ ಠಾಣಾ ಪಿಎಸ್ಐ ದಾಳೇಗೌಡ ದಾಳಿ ನೆಡೆಸಿ ಮಾಚೋಹಳ್ಳಿ ಮೂಲದ ಶಂಕರ್ @ ವಾಲೆ 27, ಚಿಕ್ಕಗೊಲ್ಲರಹಟ್ಟಿಯ ನವೀನ್ 20 ಎಂಬುವರನ್ನ ಬಂಧಿಸಿದ್ದು, ಕೃತ್ಯಕ್ಕೆ ಬಳಸುವ ಕಬ್ಬಿಣದ ರಾಡ್, ಚಾಕು, ದೊಣ್ಣೆ ಮತ್ತು ಖಾರದ ಪುಡಿಯನ್ನ ಜಪ್ತಿ ಮಾಡಿದ್ದಾರೆ.
ಅಲ್ಲದೆ ಕಾರ್ಯಚರಣೆ ವೇಳೆ ಮನೋಜ್ ಜೊತೆ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಹಣದ ಸಮಸ್ಯೆ ಉಂಟಾದಾಗ ಮಾತ್ರ ದರೋಡೆಗೆ ಇಳಿಯುತ್ತಿದ್ದಾಗಿ ಪೊಲೀಸರ ಮುಂದೆ ಅರೋಪಿಗಳ ಹೇಳಿಕೆ ನೀಡಿದ್ದಾರೆ. ಈ ಸಂಬಂಶ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡ ಆರೋಪಿಗಳಿಗಾಗಿ ಪೊಲೀಸ್ರು ತಲಾಷ್ ನೆಡೆಸುತ್ತಿದ್ದಾರೆ
Kshetra Samachara
23/04/2022 07:43 pm