ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೀಗ ಹಾಕಿದ್ದ ಮನೆಗಳೇ ಇವರ ಟಾರ್ಗೆಟ್: ಮನೆ ಹುಡುಕಲು ಜೈಲಿನಲ್ಲಿದ್ದ ಲೋಕಲ್ ಕಳ್ಳನಿಗೆ ಬೇಲ್

ಆರ್ ಆರ್ ನಗರ: ಇವರು ಖತರ್ನಾಕ್ ಗಳಲ್ಲೇ ಖತರ್ನಾಕ್ ಗಳು. ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇವ್ರು ಬಾಂಬೆ ಮೂಲದವರು. ಇನ್ನೊಬ್ಬ ಬಿಡದಿ ಮೂಲದವನು. ಮುಂಬೈ ಟು ಬಿಡದಿಗೆ ಹೇಗೆ ಕನೆಕ್ಷನ್ ಅನ್ನೋ ಸ್ಟೋರಿ ಇಲ್ಲಿದೆ ನೋಡಿ.

ಇವರ ಹೆಸರು ಸಲೀಂ ರಫೀಕ್, ಬಿಲಾಲ್ ಮಂಡಾಲ್. ಕಳ್ಳತನಕ್ಕೆ ಫ್ಲೈಟ್ ನಲ್ಲಿ ಬರೋ ಇವ್ರು , ಖರ್ಚಿಗೆ ದುಡ್ಡು ಕಡಿಮೆಯಾದ್ರೆ ಸಾಕು ವಾರಕ್ಕೊಮ್ಮೆ ಅಥಾವ ತಿಂಗಳಿಗೊಮ್ಮೆ ರಾಜ್ಯಕ್ಕೆ ವಿಮಾನದಲ್ಲಿ ಹಾರಿ ಬರ್ತಿದ್ರು. ಮೂರ್ನಾಲ್ಕು ದಿನದಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಅಷ್ಟಕ್ಕೂ ಈ ಬಾಂಬೆ ಗ್ಯಾಂಗ್ ಕಳ್ಳತನಕ್ಕೆ ಬಿಡದಿಯ ವಿನೋದ್ ಕೈ ಜೋಡಿಸಬೇಕಿತ್ತು. ಈ ಹಿಂದೆ ಸರಗಳ್ಳತನ ಕೇಸ್ ನಲ್ಲಿ ವಿನೋದ್ ರಾಜ್ ಅರೆಸ್ಟ್ ಆಗಿ ಜೈಲು ಸೇರಿದ್ದ. ಜೈಲಿನಲ್ಲಿ ಸಲೀಂ ರಫೀಕ್, ಬಿಲಾಲ್ ಮಂಡಾಲ್ ಗೆ ವಿನೋದ್ ಪರಿಚಯವಾಗಿತ್ತು. ನಂತರ ಜೈಲಿನಲ್ಲಿ ಮೂವರು ಒಳ್ಳೆಯ ಗೆಳೆಯರಾಗಿದ್ರು. ವಿನೋದ್ ಗೆ ಬಿಲಾಲ್ ಕಡೆಯವರು ಬೇಲ್ ಮಾಡಿಸಿಕೊಟ್ಟಿದ್ರು. ನಂತರ ಬಿಲಾಲ್ ಸಲೀಂ ಮಹಾರಾಷ್ಟ್ರಕ್ಕೆ ತೆರಳಿದ್ರು. ಅದ್ರೆ ಈ ಸ್ನೇಹ ಕಂಟಿನ್ಯೂ ಆಗಿದ್ದು ಮಾತ್ರ ಕಳ್ಳತನಕ್ಕೆ. ಯೆಸ್ ಈ ವಿನೋದ್ ರಾಜ್ ಬೆಂಗಳೂರಿಗೆ ಬಂದು ಬೀಗ ಹಾಕಿರೋ ಮನೆಗಳನ್ನ ಗುರುತು ಮಾಡಿಕೊಂಡು ಹೋಗ್ತಿದ್ದ. ಮತ್ತು ಮನೆಯವರೆಲ್ಲ ಯಾವ ಸಮಯದಲ್ಲಿ ಹೊರಗೆ ಹೋಗ್ತಾರೆ ಯಾವಾಗ ವಾಪಸ್ ಬರ್ತಾರೆ ಅನ್ನೋ ಫುಲ್ ಡೀಟೈಲ್ಸ್ ಕಲೆಕ್ಟ್ ಮಾಡ್ತಿದ್ದ. ಅದನ್ನ ಸಲೀಂ ಹಾಗೂ ಬಿಲಾಲ್ ಗೆ ನೀಡ್ತಿದ್ದ.

ಇದೇ ರೀತಿ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಮನೆ ಕಳ್ಳತನ ಮಾಡಿದ್ರು. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ 2 ಮನೆಗಳಲ್ಲಿ ತಮ್ಮ ಕೈ ಚಳಕ ತೋರಿಸಿ ಎಸ್ಕೇಪ್ ಆಗಿದ್ರು. ಅಷ್ಟೇ ಅಲ್ಲದೇ ಮನೆಯಲ್ಲಿ ನಿಲ್ಲಿಸಿದ್ದ ಒಂದು ಕಾರನ್ನ ಸಹ ಕದ್ದು ಎಸ್ಕೇಪ್ ಆಗಿದ್ರು. ಆರ್ ಆರ್ ನಗರ ಮತ್ತು ಜ್ಞಾನ ಭಾರತಿ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ರು. ಕೊನೆಗೂ ಆರ್ ಆರ್ ನಗರ ಇನ್ಸ್ಪೆಕ್ಟರ್ ನಾಗರಾಜ್ ಅಂಡ್ ಟೀಂ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 28 ಲಕ್ಷ ಬೆಲೆಬಾಳುವ ಚಿನ್ನಾಭರಣ, 9 ಕೆ.ಜಿ ಬೆಳ್ಳಿ, ಒಂದು ಕಾರು , ಬೈಕ್ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಬೆಂಗಳೂರಿನ ವಿವಿಧೆಡೆ ಒಟ್ಟು 30 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರೋದು ಪತ್ತೆಯಾಗಿದೆ.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

21/04/2022 05:43 pm

Cinque Terre

56.92 K

Cinque Terre

2

ಸಂಬಂಧಿತ ಸುದ್ದಿ