ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೆ.ಜೆ.ನಗರ ಚಂದ್ರು ಕೊಲೆ ಪ್ರಕರಣ; ಸಿಐಡಿಯಿಂದ ಆರೋಪಿಗಳ ವಿಚಾರಣೆ

ಬೆಂಗಳೂರು: ಜೆ.ಜೆ. ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರ ತಂಡ ಚುರುಕುಗೊಳಿಸಿದೆ. ಚಂದ್ರು ಜೊತೆಗಿದ್ದ ಸೈಮನ್ ವಿಚಾರಣೆಯಲ್ಲಿ ಕಾರಣ ಬಯಲಾಗಿದ್ದು, ಮತ್ತೊಂದೆಡೆ ಆರೋಪಿಗಳನ್ನು ಸಿಐಡಿ ವಶಕ್ಕೆ ಪಡೆದಿದೆ. ಕೊಲೆ ಸಂದರ್ಭ ಚಂದ್ರು ಜೊತೆಗಿದ್ದ ಸೈಮನ್ ವಿಚಾರಣೆ ವೇಳೆ ಕೊಲೆಗೆ ಅಸಲಿ ಕಾರಣ ಬಯಲಾಗಿದೆ.

ಆರಂಭದಲ್ಲಿ ಉರ್ದು ಮಾತನಾಡದ ಕಾರಣಕ್ಕೆ ಚಂದ್ರು ಕೊಲೆಯಾಗಿದೆ ಎಂದಿದ್ದ ಸೈಮನ್, ಸಿಐಡಿ ವಿಚಾರಣೆಯಲ್ಲಿ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ಆರಂಭವಾಯ್ತು. ಅವರು ಉರ್ದುವಿನಲ್ಲಿ ಬೈದ್ರು, ನಾವೂ ಬೈದ್ವಿ. ಆದ್ರೆ, ಗಲಾಟೆಗೆ ಕಾರಣ ಬೈಕ್ ಟಚ್ ಆಗಿದ್ದು ಎಂದು ವಿವರಿಸಿದ್ದಾನೆ.

ಮತ್ತೊಂದೆಡೆ ಮೂವರೂ ಆರೋಪಿಗಳನ್ನು ಸಿಐಡಿ ವಶಕ್ಕೆ ಪಡೆದಿದೆ. ಜೆ.ಜೆ.ನಗರ ಪೊಲೀಸರಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶಾಹೀದ್, ಶಾಹೀದ್ ಹಾಗೂ ಮತ್ತೋರ್ವ ಅಪ್ರಾಪ್ತ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಸಿಐಡಿ ತನಿಖಾಧಿಕಾರಿಗಳ ತಂಡ ವಿಚಾರಣೆ ಆರಂಭಿಸಿದೆ.

ಸೈಮನ್ ಹೇಳಿಕೆಯಂತೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆಯಾಯ್ತಾ? ಹತ್ಯೆಗೆ ಕಾರಣಗಳೇನು? ಮಾರಕಾಸ್ತ್ರ ಇಟ್ಟುಕೊಂಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ವಿಚಾರಣೆ ಹಂತದಲ್ಲಿ ಘಟನಾ ಸ್ಥಳಕ್ಕೆ ಸಹ ಆರೋಪಿಗಳನ್ನ ಕರೆದೊಯ್ಯಲಿದ್ದು, ಸಿಐಡಿ ಸ್ವತಃ ಮಹಜರು ಪ್ರಕ್ರಿಯೆ ನಡೆಸಲಿದೆ. ಬಳಿಕ ಸಂಚಲನ ಸೃಷ್ಟಿಸಿದ್ದ ಹತ್ಯೆ ಪ್ರಕರಣಕ್ಕೆ ಫುಲ್ ಸ್ಟಾಪ್ ಬೀಳಲಿದೆ.

Edited By : Nagesh Gaonkar
PublicNext

PublicNext

19/04/2022 10:16 pm

Cinque Terre

47.87 K

Cinque Terre

0