ಬೆಂಗಳೂರು: ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ವಿಲ್ಸನ್ ಗಾರ್ಡನ್ ಕ್ಲಬ್ ಪ್ಲಾಟ್ ವೊಂದರಲ್ಲಿ11ಜನ ಇಸ್ಪೀಟ್ ಆಡುವಾಗ ದಾಳಿ ನಡೆಸಿ ಸುಮಾರು 5.75 ಲಕ್ಷ ನಗದು ಮತ್ತು ಇಸ್ಪೀಟ್ ಕಾರ್ಡ್ ಗಳನ್ನು ಸೀಜ್ ಮಾಡಿದ್ದಾರೆ.
ಇನ್ನೂ ಕ್ಲಬ್ ನ ಸದಸ್ಯರ ಐಡಿ ಕಾರ್ಡ್ ಬಳಸಿಕೊಂಡು ಹೊರಗಿನಿಂದ ಪಂಟರ್ ಗಳನ್ನ ಕರೆಸಿ ಅಕ್ರಮವಾಗಿ ಅಂದರ್ ಬಾಹರ್ ಆಟ ಆಡಿಸ್ತಿದ್ರು ಎಂದು ತಿಳಿದು ಬಂದಿದೆ. ಸದ್ಯ ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
Kshetra Samachara
14/04/2022 03:04 pm