ಬೆಂಗಳೂರು: ಈಗೆಲ್ಲಾ ಹಳ್ಳಿಗಳಲ್ಲಿ ಊರ ಹಬ್ಬದ ಸಂಭ್ರಮ ಜೋರಾಗಿದೆ. ಈ ಊರ ಹಬ್ಬಕ್ಕೆ ತಮಟೆ ಟಪಾಗುಚ್ಚಿ ಸದ್ದೇ ಜೋರಾಗಿರುತ್ತದೆ. ಆದ್ರೀಗ ಅದೇ ಟಪಾಗುಚ್ಚಿಗೆ ಟೈಂ ಕೊಟ್ಟಿಲ್ಲ ಅಂತ ದೇವಾಲಯದ ಅರ್ಚಕರು ತಮಟೆಯವರ ಮೇಲೆ ಮಚ್ಚಿನಿಂದ ಪುಂಡರು ದಾಳಿ ನಡೆಸಿದ್ದಾರೆ. ತಾವರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಲ್ಲಿಯ ಶನೇಶ್ವರಸ್ವಾಮಿ ದೇವಾಲಯದ ಈ ದುರ್ಘಟನೆ ನಡೆದಿದೆ.
ಅರ್ಚಕ ಶಶಿಕುಮಾರ್, ಬಸವರಾಜ್ ಸೇರಿ ನಾಲ್ಕೈದು ಜನರ ಮೇಲೆ ಮಚ್ಚಿನಿಂದ 8 ಮಂದಿ ದಾಳಿ ನಡೆಸಿದ್ದಾರೆ. ನಿನ್ನೆಯಿಂದ ಶನೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ನಡೆಯುತ್ತಿತ್ತು ತಡರಾತ್ರಿ ವೇಳೆ ಅಲ್ಲಿಗೆ ಬಂದಿದ್ದ ಒಂದು ಪುಡಾರಿಗಳ ಗುಂಪು ತಮಟೆ ಹೊಡೆಯುತ್ತಿದ್ದವರ ಬೆದರಿಸಿಕೊಂಡು ಡ್ಯಾನ್ಸ್ ಮಾಡುತ್ತಿತ್ತು. ಈ ವೇಳೆ ಅಲ್ಲಿನ ಸ್ಥಳೀಯರು ಕೇಳಿದಾಗ ಅಲ್ಲಿಂದ ಹೋಗಿದ್ದ ಗ್ಯಾಂಗ್ ಮತ್ತೆ ಮಧ್ಯ ರಾತ್ರಿ ಲಾಂಗು ಮಚ್ಚು ಸಮೇತ ಬಂದು ಏಕಾಏಕಿ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಮೇಲೆ ಮನಬಂದಂತೆ ಲಾಂಗು, ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ತಾವರೆಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಪುಂಡ ಗಾಂಜ ನಶೆಯಲ್ಲಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
PublicNext
09/04/2022 10:54 pm