ಬೆಂಗಳೂರು : ಆ ದಿನ ನನ್ನ ಹುಟ್ಟು ಹಬ್ಬಕ್ಕೆ ಚಿಕನ್ ರೋಲ್ ತಿನ್ನೋಕೆ ಗುಡ್ಡದಹಳ್ಳಿಗೆ ಹೋಗಿದ್ವಿ, ಆ ದಿನ ನಮ್ಮ ಮೇಲೆ ಹಲ್ಲೆ ಮಾಡಿದವರು ನಾವ್ ಅಲ್ಲದೆ ಬೇರೆ ಯಾರೇ ಹೋಗಿದ್ರು ಅಟ್ಯಾಕ್ ಮಾಡುತ್ತಿದ್ದರು ಎಂದು ಚಂದ್ರು ಕೊಲೆ ಕಂಡ ಸೈಮನ್ ರಾಜ್ ಹೇಳಿದ್ದಾರೆ.
ಮೊದಲು ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ ಮಾಡಿದ್ರು ಉರ್ದು ಅಲ್ಲಿ ಮಾತಾಡು, ಏನ್ ಬೈದೆ ಹೇಳು ಅಂದ್ರು, ನನಗೆ ಕನ್ನಡ ಬರಲ್ಲ ಅಂತ ಗಲಾಟೆ ಮಾಡಿದ್ರು, ನಾನ್ ಏನೂ ಬೈದಿಲ್ಲ ಅಂತ ಹೇಳಿದ್ರೂ ಅವ್ರು ಕೇಳಲಿಲ್ಲ.
ಏಕಾಏಕಿ ಚಾಕು ತೆಗೆದು ಹಲ್ಲೆ ನಡೆಸಿದ್ರು. ನಂತರ ಚಂದ್ರುನಾ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆ ಆದ್ರೆ ಜಾಸ್ತಿ ಬ್ಲಡ್ ಬ್ಲೀಡ್ ಆಗಿದ್ದರಿಂದ ಚಂದ್ರು ಸವನ್ನಪ್ಪಿದ್ದಾನೆ. ಎಂದು ಮೃತ ಚಂದ್ರು ಸಹೋದರ ಹೇಳಿಕೆ ನೀಡಿದ್ದಾನೆ.
PublicNext
09/04/2022 02:50 pm